ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ | ಔಷಧ ಅಡ್ಡ ಪರಿಣಾಮ: ಕುರಿಗಳ ಸಾವು

ಕುರಿಗಳ ಸಾವು
Published 9 ಜುಲೈ 2024, 16:00 IST
Last Updated 9 ಜುಲೈ 2024, 16:00 IST
ಅಕ್ಷರ ಗಾತ್ರ

ಕನಕಪುರ: ಜಂತು ನಿವಾರಕ ಔಷಧ ಅಡ್ಡ ಪರಿಣಾಮದಿಂದ 35ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. 20ಕ್ಕೂ ಕುರಿಗಳಿಗೆ ಕಣ್ಣು ಕಾಣದೆ ನಿತ್ರಾಣಗೊಂಡಿವೆ. 

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಹೆಗ್ಗನೂರುದೊಡ್ಡಿ ರೈತ ಮುತ್ತುರಾಜು ಅವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ನಾಲ್ಕೈದು ದಿನಗಳ ಹಿಂದೆ ಜಂತು ನಿವಾರಕ ಔ‍ಷಧ ಹಾಕಿಸಿದ್ದಾರೆ. ಇದು ಅಡ್ಡಪರಿಣಾಮ ಬೀರಿ ಕುರಿಗಳು ಭೇದಿ ಮಾಡಿಕೊಂಡು ನಿತ್ರಾಣಗೊಂಡಿವೆ.

ಕುರಿಗಳಿಗೆ ಕೊಟ್ಟಿರುವ ಜಂತು ನಾಶಕ ಔಷಧ ಪ್ರಮಾಣಕ್ಕಿಂತ ಹೆಚ್ಚು ನೀಡಿರುವುದೇ ಕುರಿಗಳ ಸಾವಿಗೆ ಕಾರಣ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಯು.ಸಿ.ಕುಮಾರ್‌ ತಿಳಿಸಿದ್ದಾರೆ.

ಕುರಿ ಸಾಕಾಣಿಕೆ ಮಾಡಿರುವ ಮುತ್ತುರಾಜು, ಪಶು ವೈದ್ಯರ ಮಾರ್ಗದರ್ಶನ ಪಡೆಯದೆ ಸ್ವಯಂ ಪ್ರೇರಣೆಯಿಂದ ಜಂತು ನಾಶಕ ಕುರಿಗಳಿಗೆ ಹಾಕಿದ್ದಾರೆ. ಅಡ್ಡಪರಿಣಾಮವಾಗಿ ಕುರಿಗಳಿಗೆ ಭೇದಿ ಮತ್ತು ಕಣ್ಣು ಕಾಣದಂತಾಗಿದೆ ಎಂದರು.

ಸಮಯಕ್ಕೆ ಸರಿಯಾಗಿ ಪಶು ವೈದ್ಯರು ಬಂದು ಚಿಕಿತ್ಸೆ ಕೊಡೆದ ನಿರ್ಲಕ್ಷ್ಯ ಮಾಡಿದ್ದರಿಂದ ಕುರಿಗಳು ಸಾವನ್ನಪ್ಪಿವೆ ಎಂದು ಕುರಿಸಾಕಾಣಿಕೆದಾರ ಮುತ್ತುರಾಜು ದೂರಿದ್ದಾರೆ.

ಕುರಿಗಳಿಗೆ ಕೊಟ್ಟ ಜಂತು ನಾಶಕವನ್ನು ಡಾ.ಯು.ಸಿ.ಕುಮಾರ್‌ ಪರಿಶೀಲಿಸಿದರು
ಕುರಿಗಳಿಗೆ ಕೊಟ್ಟ ಜಂತು ನಾಶಕವನ್ನು ಡಾ.ಯು.ಸಿ.ಕುಮಾರ್‌ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT