ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ | ಬಡ್ತಿಗೆ ಪರಿಗಣಿಸಲು ಮನವಿ

Published 19 ಜೂನ್ 2024, 7:17 IST
Last Updated 19 ಜೂನ್ 2024, 7:17 IST
ಅಕ್ಷರ ಗಾತ್ರ

ಕನಕಪುರ: ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುವವರನ್ನು ಸಹ ಶಿಕ್ಷಕರೆಂದು ಪರಿಗಣಿಸಿ ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ಕೊಡಬೇಕೆಂದು ಒತ್ತಾಯಿಸಿ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳು ಬಿಇಒ ಅವರ ಮೂಲಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವವರು ಸಹ ಶಿಕ್ಷಕರಿಗೆ ಸರಿ ಸಮಾನವಾಗಿ ಕಾರ್ಯ ನಿರ್ವಹಿಸುತ್ತಾರೆ. ಆದರೆ ಸಹ ಶಿಕ್ಷಕರಿಗೆ ಸಿಗುವ ಸವಲತ್ತುಗಳು ಮಾತ್ರ ಸಿಗುತ್ತಿಲ್ಲ, ತಾರತಮ್ಯ-ಅಸಮಾನತೆಯಿದೆ ಎಂದು ಶಿಕ್ಷಕರು ದೂರಿದರು.

ದೈಹಿಕ ಶಿಕ್ಷಣ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿ ಹಲವು ವರ್ಷಗಳಿಂದ  ಹೋರಾಟ ನಡೆಸುತ್ತಿದ್ದೇವೆ. 2024ರ ಜುಲೈ ಅಂತ್ಯದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಇಲಾಖೆ ನಡೆಸುವ ಕ್ರೀಡಾಕೂಟ ಬಹಿಷ್ಕರಿಸುತ್ತೇವೆ ಎಂದು ಮನವಿಯಲ್ಲಿ ಶಿಕ್ಷಕರು ತಿಳಿಸಿದ್ದಾರೆ.

ತಾಲ್ಲೂಕು ಅಧ್ಯಕ್ಷ ರಮೇಶ್‌, ಗೌರವ ಅಧ್ಯಕ್ಷ ಫ್ರಾನ್ಸಿಸ್ ಚಾರಪ್ಪ, ಉಪಾಧ್ಯಕ್ಷೆ ಜಯಶೀಲ, ಕಾರ್ಯದರ್ಶಿ ಟಿ.ಪಿ.ಸುರೇಂದ್ರ, ಸಹ ಕಾರ್ಯದರ್ಶಿ ಚಿಕ್ಕವೆಂಕಟರಮಣಪ್ಪ, ಖಜಾಂಚಿ ಕೆ.ಟಿ.ಸುರೇಶ್‌ ಹಾಗೂ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT