ಮಂಗಳವಾರ, ಜೂನ್ 22, 2021
27 °C

ತಿಪ್ಪಸಂದ್ರ ಹೋಬಳಿ ಕೇಂದ್ರದಲ್ಲಿ ಕೋವಿಡ್‌ ಆಸ್ಪತ್ರೆ ಆರಂಭಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೋಬಳಿ ಕೇಂದ್ರದಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೋವಿಡ್‌ ಆಸ್ಪತ್ರೆಯನ್ನಾಗಿಸಬೇಕು ಎಂದು ಹೋರಾಟಗಾರ ಗೊರವನಪಾಳ್ಯ ಹರೀಶ್‌ ಆಗ್ರಹಿಸಿದರು.

ಭಾನುವಾರ ತಿಪ್ಪಸಂದ್ರದ ಸರ್ಕಾರಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದರು.

ತಿಪ್ಪಸಂದ್ರ ಹೋಬಳಿ ಕೇಂದ್ರದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50 ಹಾಸಿಗೆಗಳ ಅನುಕೂಲವಿದೆ. ಕೊಠಡಿಗಳಿವೆ. ಕೋವಿಡ್‌ ಸೆಂಟರ್‌ ಮಾಡಲು ಸೂಕ್ತವಾಗಿದೆ ಎಂದರು.

ತಿಪ್ಪಸಂದ್ರ ಹೋಬಳಿ ತಾಲ್ಲೂಕು ಕೇಂದ್ರದಿಂದ ದೂರದಲ್ಲಿದೆ. ಕೋವಿಡ್‌ ಸೋಂಕಿನಿಂದ ಸಾವುನೋವು ಅಧಿಕವಾಗಿವೆ. ನಮ್ಮ ಹೋಬಳಿಯವರೆ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಹೋಬಳಿ ಜನರಿಗೆ ಅನುಕೂಲ
ಮಾಡಿಕೊಡಲು
ತಿಪ್ಪಸಂದ್ರ ಗ್ರಾಮದಲ್ಲಿ ಕೋವಿಡ್‌ ಆಸ್ಪತ್ರೆ ಆರಂಭಿಸಲು
ಮುಂದಾಗಬೇಕು ಎಂದು ಡಿಸಿಎಂ ಅವರಿಗೆ ಪತ್ರ ಬರೆದು ಮನವಿ ಮಾಡಿರುವುದಾಗಿ ಪಾಳ್ಯದ ಹಳ್ಳಿ ಕಾಡುಗೊಲ್ಲರ ಹಟ್ಟಿ ಮುಖಂಡ ದಾಸೇಗೌಡ ತಿಳಿಸಿದರು.

ಮುಖಂಡ ಬಸವರಾಜು, ರವಿಕುಮಾರ್‌, ಗುಡ್ಡಯ್ಯ, ಶ್ರೀನಿವಾಸ್‌, ಟಿ.ಕೆ.ಶ್ರೀನಿವಾಸ್‌, ರಮೇಶ್‌ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು