ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದೂರು: ಪೊಲಿಯೋ ಮುಕ್ತ ಭಾರತ ಅಭಿಯಾನ

Published 4 ಮಾರ್ಚ್ 2024, 5:38 IST
Last Updated 4 ಮಾರ್ಚ್ 2024, 5:38 IST
ಅಕ್ಷರ ಗಾತ್ರ

ಕುದೂರು: ರೋಟರಿ ಕುದೂರು ಸೆಂಟ್ರಲ್ ವತಿಯಿಂದ ಕುದೂರು ಪಟ್ಟಣದ ಕೆಪಿಎಸ್ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಪೊಲಿಯೋ ಮುಕ್ತ ಭಾರತ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ರೋಟರಿ ಸಂಸ್ಥೆಯ ಪದಾಧಿಕಾರಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.  ಚಿಕ್ಕ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದರ ಮೂಲಕ ಪೊಲಿಯೋ ಮುಕ್ತ ಭಾರತಕ್ಕಾಗಿ ಕೈಜೋಡಿಸಬೇಕೆಂಬ ಭಿತ್ತಿ ಪತ್ರಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ರೋಟರಿ ಕುದೂರು ಸೆಂಟ್ರಲ್ ಅಧ್ಯಕ್ಷ ಜಿ. ಕೃಷ್ಣಮೂರ್ತಿ , ಉಪಾಧ್ಯಕ್ಷ ಎಂ.ಜಿ. ಮಹೇಶ್. ಖಜಾಂಚಿ ಲೋಕೇಶ್, ಕಾರ್ಯದರ್ಶಿ ರವಿ ಎಚ್.ಜಿ., ಜಂಟಿ ಕಾರ್ಯದರ್ಶಿ ಧರ್ಮಪಾಲ್, ಸದಸ್ಯರಾದ ಹರೀಶ್, ಓಂಪ್ರಕಾಶ್, ರಮೇಶ್ ಕೆ.ಎಂ., ಲೋಕೇಶ್, ರುದ್ರೇಶ್, ನಿಂಗೇಗೌಡ, ಎಸ್‌ಡಿಎಂಸಿ ಉಪಾಧ್ಯಕ್ಷ ಪದ್ಮನಾಭ್, ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT