ತಿಪ್ಪಸಂದ್ರ ಹೋಬಳಿಯ ಮುಳ್ಳುಕಟ್ಟಮ್ಮನಪಾಳ್ಯ ಗ್ರಾಮದ ಮುಳ್ಳುಕಟ್ಟಮ್ಮ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಹುಂಡಿಯಲ್ಲಿದ್ದ ಸುಮಾರು ₹15 ಸಾವಿರ ಹಣ ಕಳ್ಳತನವಾಗಿದೆ ಎಂದು ದೇವಾಲಯದ ಅರ್ಚಕ ಮಹೇಶ್ ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೇವರ ಮೈ ಮೇಲಿದ್ದ ಚಿನ್ನದ ಒಡವೆ, ಬೆಳ್ಳಿ ವಸ್ತುಗಳು ಯಾವವೂ ಕಳ್ಳತನವಾಗಿಲ್ಲ. ಹುಂಡಿಯ ಹಣ ಮಾತ್ರ ಹೋಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.