ಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ಸಾಮಾಜಿಕ ಪರಿಣಾಮದ ಸಮೀಕ್ಷೆ ಯಾಕೆ ಆಗಿಲ್ಲ. ರೈತರ ಜೊತೆ ಇದುವರೆಗೆ ಸಭೆ ನಡೆಸದೆ ಈಗ ಭೂ ಪರಿಹಾರ ಚರ್ಚೆಗೆ ಏಕಾಏಕಿ ಸಭೆ ಮಾಡಿರುವುದು ಸರಿಯಲ್ಲ. ಮತ್ತೊಮ್ಮೆ ಸಭೆ ಹಮ್ಮಿಕೊಳ್ಳಿ
– ಎ. ಮಂಜುನಾಥ್ ಮಾಜಿ ಶಾಸಕ
ಜಿಲ್ಲಾಧಿಕಾರಿ ಅವರು ಉಪನಗರ ಯೋಜನಾ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ರೈತರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿ. ಆಗ ಯೋಜನೆ ಪರ ಮತ್ತು ವಿರುದ್ಧ ಎಷ್ಟು ಜನ ಇದ್ದಾರೆ ಎಂಬ ಸತ್ಯ ಗೊತ್ತಾಗಲಿದೆ
– ರಾಮಯ್ಯ ಅಧ್ಯಕ್ಷ ಭೈರಮಂಗಲ– ಕಂಚುಗಾರನಹಳ್ಳಿ ಗ್ರಾ.ಪಂ ರೈತರ ಭೂ ಹಿತರಕ್ಷಣಾ ಸಂಘ
ಜಿಲ್ಲಾಧಿಕಾರಿ ಸಭಾ ಸೂಚನಾಪತ್ರದಲ್ಲಿ ತಿಳಿಸಿರುವಂತೆ ಎಲ್ಲಾ ಜಮೀನು ಮಾಲೀಕರ ಜೊತೆ ಸಭೆ ನಡೆಸದೆ ಕರ್ತವ್ಯಲೋಪ ಎಸಗಿದ್ದಾರೆ. ಯೋಜನೆ ವಿರೋಧಿಸಿ ಲಿಖಿತವಾಗಿ ಆಕ್ಷೇಪಣೆ ಕೊಟ್ಟಿರುವ ರೈತರು ಕೋರ್ಟ್ ಮೊರೆ ಹೋಗುತ್ತೇವೆ
– ಪ್ರಕಾಶ್ ಎಚ್.ಜಿ ಭೈರಮಂಗಲ– ಕಂಚುಗಾರನಹಳ್ಳಿ ಗ್ರಾ.ಪಂ ರೈತರ ಭೂ ಹಿತರಕ್ಷಣಾ ಸಂಘ