ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಬೈಲ್‌ಗೆ ಬಂದ ಲಿಂಕ್‌ ಒತ್ತಿ ₹12.70 ಲಕ್ಷ ಕಳೆದುಕೊಂಡ ಪ್ರಾಧ್ಯಾಪಕ!

Published 12 ಆಗಸ್ಟ್ 2024, 5:26 IST
Last Updated 12 ಆಗಸ್ಟ್ 2024, 5:26 IST
ಅಕ್ಷರ ಗಾತ್ರ

ರಾಮನಗರ: ವಾಟ್ಸ್‌ ಆ್ಯಪ್‌ನಲ್ಲಿ ಬಂದ ಹೂಡಿಕೆ ಲಿಂಕ್‌ ಕ್ಲಿಕ್ ಮಾಡಿದ ಮಾಗಡಿ ತಾಲ್ಲೂಕಿನ ಪ್ರಾಧ್ಯಾಪಕರೊಬ್ಬರು ಬ್ಲಾಕ್ ಟ್ರೇಡಿಂಗ್ ಹೂಡಿಕೆ ವಂಚಕರ ಜಾಲಕ್ಕೆ ಸಿಲುಕಿ ₹12.70 ಲಕ್ಷ ಕಳೆದುಕೊಂಡಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಆನ್‌ಲೈನ್ ಸರ್ವೀಸ್ ಲಿಂಕ್‌ ಹೆಸರಿನಲ್ಲಿ ಅಪರಿಚಿತ ವಾಟ್ಸ್‌ಆ್ಯಪ್‌ ಸಂಖ್ಯೆಯಿಂದ ಬಂದಿದ್ದ ಸಂದೇಶವನ್ನು ಪ್ರಾಧ್ಯಾಪಕ ಕ್ಲಿಕ್ ಮಾಡಿದ್ದಾರೆ. ಆಗ ಬ್ಲಾಕ್ ಟ್ರೇಡಿಂಗ್‌ನಲ್ಲಿ ಹೂಡಿಕೆ
ಮಾಡಿದರೆ ಶೇ 5–6 ಲಾಭ ಪಡೆಯಬಹುದು ಎಂಬ ಸಂದೇಶ ಕಾಣಿಸಿಕೊಂಡಿದೆ. ನಂತರ ಪ್ರಾಧ್ಯಾಪಕರು, ವಂಚಕರು ಕಳಿಸಿದ ಫಾರಂ ಭರ್ತಿ ಮಾಡಿ ತಮ್ಮ ಬ್ಯಾಂಕ್ ಖಾತೆ ವಿವರ ಹಂಚಿಕೊಂಡಿದ್ದಾರೆ.

ನಂತರ ವಂಚಕರ ಸೂಚನೆ ಮೇರೆಗೆ ವಿವಿಧ ಬ್ಯಾಂಕ್‌ ಖಾತೆಗೆ ಜುಲೈ 4ರಿಂದ ಆಗಸ್ಟ್ 6ರವರೆಗೆ ಒಟ್ಟು ₹12,69,101 ಹಣವನ್ನು ತಮ್ಮ ಬ್ಯಾಂಕ್ ಖಾತೆಯಿಂದ ಆನ್‌ಲೈನ್‌ ಮೂಲಕ ವರ್ಗಾವಣೆ ಮಾಡಿದ್ದಾರೆ.

ಹೆಚ್ಚು ಹೂಡಿಕೆ ಮಾಡಿದಷ್ಟು ಹೆಚ್ಚು ಕಮಿಷನ್ ಸಿಗಲಿದೆ ಎಂದು ಆಸೆ ತೋರಿಸಿದ ವಂಚಕರು ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಕಮಿಷನ್ ಹಣವಿರಲಿ, ಅಸಲು ಹಣವೂ ಹಿಂದಿರುಗಿಲ್ಲ.

ಆಗ ಪ್ರಾಧ್ಯಾಪಕರಿಗೆ ತಾನು ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿರುವುದು ಗೊತ್ತಾಗಿದೆ. ನಂತರ, ಠಾಣೆಗೆ ಬಂದು ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ರಾಮನಗರ ಸಿಇಎನ್ ಪೊಲೀಸರು
ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT