ಮಂಗಳವಾರ, ಆಗಸ್ಟ್ 3, 2021
24 °C

ಚನ್ನಪಟ್ಟಣ: ಎಂ.ಜಿ. ರಸ್ತೆಯಲ್ಲಿ ತಡರಾತ್ರಿ ಚಿರತೆ ಪ್ರತ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ಚನ್ನಪಟ್ಟಣದ ಎಂ.ಜಿ. ರಸ್ತೆಯಲ್ಲಿ ಸೋಮವಾರ ತಡರಾತ್ರಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಆ ದೃಶ್ಯ ಮನೆಯೊಂದರ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಡರಾತ್ರಿ 2 ಗಂಟೆ ಸಮಯದಲ್ಲಿ ಚಿರತೆಯೊಂದು ಎಂ.ಜಿ.ರಸ್ತೆಯ ಉದ್ಯಮಿ ಮೋತಿಲಾಲ್ ಅವರ ಮನೆಯ ಮುಂಭಾಗ ನಡೆದುಕೊಂಡು ಹೋಗಿರುವ ದೃಶ್ಯ ದಾಖಲಾಗಿದೆ. ಈ ವಿಡಿಯೊ ವೈರಲ್ ಆಗಿದ್ದು, ನಗರವಾಸಿಗಳು ಭಯಭೀತರಾಗಿದ್ದಾರೆ.

ಪಟ್ಟಣದ ಸುಣ್ಣದಕೇರಿ ಕಡೆಯಿಂದ ಬಂದ ಈ ಚಿರತೆ ಎಂ.ಜಿ.ರಸ್ತೆಯಲ್ಲಿ ಎರಡು ಸುತ್ತು ಓಡಾಡಿದ್ದು, ಆನಂತರ ಮರೆಯಾಗಿದೆ. ಎರಡು ನಾಯಿಗಳನ್ನು ಓಡಾಡಿಸಿಕೊಂಡು ಬಂದಿರುವ ಚಿರತೆ ಎಲ್ಲಿಂದ ಇಲ್ಲಿಗೆ ಬಂದಿದೆ ಎಂಬುದು ಗೊತ್ತಾಗಿಲ್ಲ.

ಇದೇ ಪ್ರದೇಶದಲ್ಲಿ ಕೆಲವು ತಿಂಗಳ ಕರಡಿಯೊಂದು ಕಾಣಿಸಿಕೊಂಡಿದ್ದು, ಮನೆ ಕಾಂಪೌಂಡ್ ದಾಟಿ ಮಹಿಳೆ ಮೇಲೆ ದಾಳಿ ನಡೆಸಿತ್ತು.

ಇದನ್ನೂ ಓದಿ... ಪ್ರಾದೇಶಿಕ ಭಾಷೆಗೆ ಅವಕಾಶ: ಐಬಿಪಿಎಸ್‌ ಪರೀಕ್ಷಾ ಪ್ರಕ್ರಿಯೆ ತಡೆ ಹಿಡಿದ ಕೇಂದ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು