ಮಾಗಡಿ| ಬಂಡೆ ಮೇಲೆ ಚಿರತೆ ಪ್ರತ್ಯಕ್ಷ

ಮಾಗಡಿ: ತಾಲ್ಲೂಕಿನ ಬಂಟರಕುಪ್ಪೆ ಗುಡ್ಡದ ಬಂಡೆಯ ಮೇಲೆ ಶುಕ್ರವಾರ ಹಗಲು ಹೊತ್ತಿನಲ್ಲಿ ಎರಡು ಚಿರತೆ ಪ್ರತ್ಯಕ್ಷವಾಗಿದ್ದು, ಅವುಗಳನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯ ಅಧಿಕಾರಿ ಜಗದೀಶ್ ಗೌಡ ಪಟಾಕಿ ಸಿಡಿಸಿ ಚಿರತೆಗಳನ್ನು ಓಡಿಸಿದರು.
ಬಂಟರಕುಪ್ಪೆ, ಮಲ್ಲೂರು ಹಾಗೂ ಸಾವನದುರ್ಗ ಅರಣ್ಯದ ಅಂಚಿನ ಗ್ರಾಮಗಳಲ್ಲಿ ಆಗಾಗ ಪ್ರತ್ಯಕ್ಷವಾಗುವ ಚಿರತೆಗಳು ಮೇಕೆ, ಕುರಿ, ನಾಯಿ, ಹಸುವಿನ ಕರುಗಳನ್ನು ಎತ್ತಿಕೊಂಡು ಹೋಗುತ್ತವೆ.
ಸಾವನದುರ್ಗ, ಸಿದ್ದೇದೇವರ ಬೆಟ್ಟ, ಬಂಟರಕುಪ್ಪೆ ಬೆಟ್ಟದ ಮಾರ್ಗವಾಗಿ ಶಿವಗಂಗೆಯ ತನಕ ಚಿರತೆಗಳು ಸಂಚರಿಸುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.