ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಕಾರ್ಯವೇ ಲಯನ್ಸ್‌ ಕ್ಲಬ್‌ ಮೂಲ ಧ್ಯೇಯ

Last Updated 4 ಸೆಪ್ಟೆಂಬರ್ 2021, 3:16 IST
ಅಕ್ಷರ ಗಾತ್ರ

ಕನಕಪುರ: ಲಯನ್ಸ್‌ ಸಂಸ್ಥೆಯು ಸೇವಾ ಸಂಸ್ಥೆಯಾಗಿದೆ. ಸೇವಾ ಮನೋಭಾವ ಇರುವವರು ಮಾತ್ರ ಇಲ್ಲಿಗೆ ಬರುತ್ತಾರೆ. ಅಂತಹವರನ್ನು ಗುರುತಿಸಿ ಸದಸ್ಯರನ್ನಾಗಿಸಿ ಸಂಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಲಯನ್‌‌ ಮಲ್ಟಿಪಲ್‌ ಕೌನ್ಸಿಲ್‌ ಮುಖ್ಯಸ್ಥ ವಿ. ನಾಗರಾಜ ಬೈರಿ ತಿಳಿಸಿದರು.

ಇಲ್ಲಿನ ರೈಸ್‌ಮಿಲ್‌ ಬಳಿಯಿರುವ ಲಯನ್‌ ಸೇವಾ ಭವನದಲ್ಲಿ ಇತ್ತೀಚೆಗೆ ನಡೆದ ಲಯನ್ಸ್‌ ಕ್ಲಬ್‌ ಆಫ್‌ ಕನಕಪುರ ಸಿಲ್ಕ್‌ಸಿಟಿಯ ಪದವಿ ಹಸ್ತಾಂತರ ಸಮಾರಂಭದಲ್ಲಿ ನೂತನ ಅಧ್ಯಕ್ಷ ಟಿ. ರಾಮಸಂಜೀವಯ್ಯ ಅವರಿಗೆ ಪದವಿ ಹಸ್ತಾಂತರ ಮಾಡಿ ಅವರು ಮಾತನಾಡಿದರು.

ಕೊರೊನಾ ಸಂಕಷ್ಟದಲ್ಲಿ ಸಂಸ್ಥೆಯು ಸಮಾಜಮುಖಿಯಾಗಿ ಕೆಲಸ ಮಾಡಿದೆ. ಲಕ್ಷಾಂತರ ರೂಪಾಯಿಯ ಸಹಾಯವನ್ನು ಕಷ್ಟದಲ್ಲಿದ್ದವರಿಗೆ ನೀಡಿದೆ. ನಾವು ಮಾಡುವ ಕೆಲಸ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಅದಕ್ಕಾಗಿ ಸೇವಾ ಕಾರ್ಯ ನಡೆಸಿಕೊಂಡು ಸಂಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.

ಸಂಸ್ಥೆಯ ಎಲ್ಲಾ ಸೇವಾ ಕಾರ್ಯಗಳು ಸೇವಾ ಭವನದಲ್ಲಿಯೇ ನಡೆಯುತ್ತವೆ. ಆದರೆ, ಸಿಲ್ಕ್‌ಸಿಟಿಯ ಸೇವಾ ಭವನವು ಅರ್ಧಕ್ಕೆ ನಿಂತಿದೆ. ಕಟ್ಟಡವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಮುಂದಿನ ಸೇವಾ ಕಾರ್ಯಗಳು ಇಲ್ಲಿಯೇ ನಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮಾಜಿ ಗವರ್ನರ್‌ ಡಾ.ಕೆ.ಎಂ. ಮುನಿಯಪ್ಪ ಮಾತನಾಡಿ, ಕೊರೊನಾ ಕಾರಣದಿಂದ ನಮ್ಮ ಎಲ್ಲಾ ಸೇವಾ ಚಟುವಟಿಕೆ ಸ್ಥಗಿತಗೊಂಡಿದ್ದವು. ಇನ್ನು ಮುಂದೆ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಮತ್ತೆ ಚಟುವಟಿಕೆ ಪ್ರಾರಂಭವಾಗಲಿವೆ. ಸೇವಾ ಭವನ ಪೂರ್ಣಗೊಳಿಸಲು ಹೆಚ್ಚಿನ ಹಣಕಾಸಿನ ನೆರವು ಬೇಕಿದೆ. ನೆರವು ದೊರೆತ ಬಳಿಕ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು
ತಿಳಿಸಿದರು.

ಎಂ. ಅನಿಲ್‌ಕುಮಾರ್‌, ಆರ್‌.ಎನ್‌. ಮೂರ್ತಿ, ಗಂಗಾಧರ್‌ ಲಯನ್ಸ್‌ ಸಂಸ್ಥೆ ಹಾಗೂ ಸೇವಾ ಚಟುವಟಿಕೆ ಬಗ್ಗೆ ತಿಳಿಸಿಕೊಟ್ಟರು.

ನೂತನ ಅಧ್ಯಕ್ಷ ರಾಮಸಂಜೀವಯ್ಯ, ನಿಕಟಪೂರ್ವ ಅಧ್ಯಕ್ಷ ಯು.ವಿ. ಸ್ವಾಮಿಗೌಡ, ಪದಾಧಿಕಾರಿಗಳಾದ ಟಿ. ನಾರಾಯಣ್‌, ನಾಗರಾಜ ಅಡಿಗ, ಡಾ.ಯು.ಸಿ. ಕುಮಾರ್‌, ಚಿಕ್ಕೆಂಪೇಗೌಡ, ಶಿವರಾಮಯ್ಯ ಕೆ.ಎನ್‌., ನಿಖಿಲ್‌ ಎಂ. ಗೌಡ, ಬಿ.ಎಸ್‌. ಗೌಡ, ಡಾ.ಮಧು ಎಸ್‌. ಮಠ, ಮಧುಸೂದನ್‌ ಕೆ. ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT