ಶನಿವಾರ, ಸೆಪ್ಟೆಂಬರ್ 19, 2020
21 °C

ಕತ್ತು ಕೊಯ್ದು ಯುವಕನ ಕೊಲೆ:ಯುವತಿ ಪ್ರೀತಿಸಿದ್ದಕ್ಕೆ ಸಂಬಂಧಿಕರಿಂದಲೇ ಕೃತ್ಯ-ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಮಾಗಡಿ ತಾಲ್ಲೂಕಿನ ಮಾನಗಲ್ ಗ್ರಾಮದ ಬಳಿ ಭಾನುವಾರ ತಡರಾತ್ರಿ‌ ಯುವಕನೊಬ್ಬನ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.

ಗ್ರಾಮದ ಜಯಲಕ್ಷ್ಮಮ್ಮ, ಮುನಿಸ್ವಾಮಿ ಅವರ ಪುತ್ರ ರವಿ‌(22) ಕೊಲೆಗೀಡಾದ ಯುವಕ. ಆತನ ಕತ್ತು‌ ಕೊಯ್ದು, ಬೆರಳು ಕತ್ತರಿಸಿ ಶವವನ್ನು ಗುಡೇಮಾರನಹಳ್ಳಿ ರಸ್ತೆಯ ಬೆಳಗುಂಬ ಸೇತುವೆ ಬಳಿ ಎಸೆಯಲಾಗಿತ್ತು.‌

ಯುವತಿ ಕುಟುಂಬದಿಂದ ಯುವಕನ ಅಪಹರಿಸಿ ಹತ್ಯೆ: ಆರೋಪ

ಕೊಲೆಗೀಡಾದ ಯುವಕ ಅದೇ ಗ್ರಾಮದ ತನ್ನ ಸಂಬಂಧಿ ಯುವತಿ ಒಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಭಾನುವಾರ ಸಂಜೆ ಗ್ರಾಮದಲ್ಲಿ ಎರಡೂ ಕುಟುಂಬದವರ ನಡುವೆ ಗಲಾಟೆಯೂ ನಡೆದಿತ್ತು. ರಾತ್ರಿ ಯುವತಿಯ ಕುಟುಂಬದವರೇ ಯುವಕನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಮಾಗಡಿ ಪೊಲೀಸ್ ಠಾಣೆ ಮುಂಭಾಗ ನೆರೆದಿದ್ದ‌ ಮೃತನ ಸಂಬಂಧಿಕರು ದೂರಿದರು.
ಪ್ರಕರಣ ಸಂಬಂಧ ಮಾಗಡಿ ಗ್ರಾಮೀಣ ಠಾಣೆ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು