ಸರ್ಕಾರಿ ಶಾಲೆ ಕಾಂಪೌಂಡ್ ಬಿಳುವ ಸ್ಥಿತಿಯಲ್ಲಿರುವುದು
ಮೇಲ್ಚಾವಣಿ ನಿರ್ವಹಣೆ ಇಲ್ಲದೆ ಇಂಚುಗಳು ಬಿದ್ದಿರುವುದು
ಮೇಲ್ಚಾವಣಿಗೆ ಕೊಟ್ಟಿರುವ ದೊಡ್ಡ ಮರ ಬೀಳುವ ಸ್ಥಿತಿಯಲ್ಲಿ ಇರುವುದು
ಮೇಲ್ಚಾವಣಿ ಮೇಲೆ ದೊಡ್ಡ ಮರದ ಕೊಂಬೆ ಇಂದ ತೊಂದರೆ ಯಾಗುತ್ತಿರುವುದು

ಶತಮಾನ ಕಳೆದಿರುವ ಜಿಕೆಬಿಎಂಎಸ್ ಸರ್ಕಾರಿ ಶಾಲೆಯನ್ನು ಪಬ್ಲಿಕ್ ಶಾಲೆ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗುತ್ತಿದೆ. ಇದಕ್ಕಾಗಿ ರೂಪರೇಷೆ ಸಿದ್ಧಪಡಿಸಲಾಗಿದೆ. ಶತಮಾನ ಶಾಲೆ ಉಳಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ
ಎಚ್.ಸಿ.ಬಾಲಕೃಷ್ಣ ಶಾಸಕ 
ಜಿಕೆಬಿಎಂಎಸ್ ಶಾಲೆಯ ಎರಡು ಕೊಠಡಿ ದುರಸ್ತಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಶಾಸಕ ಬಾಲಕೃಷ್ಣ ಅವರ ಜೊತೆ ಸೋಮವಾರ ಸಭೆ ನಿಗದಿಯಾಗಿದೆ. ಮಾಗಡಿಗೆ ಶಿಕ್ಷಣ ಸಚಿವರು ಬರುವ ಹಿನ್ನೆಲೆಯಲ್ಲಿ ಜಿಕೆಬಿಎಂಎಸ್ ಶಾಲೆಯ ಸ್ಥಿತಿಯನ್ನು ತಿಳಿಸುವ ಬಗ್ಗೆ ಸಿದ್ಧತೆ ಮಾಡಿಕೊಳ್ಲಲಾಗಿದೆ. ಶಿಕ್ಷಣ ಇಲಾಖೆಯು ಈ ಶಾಲೆಯ ಅಭಿವೃದ್ಧಿಗೆ ಬದ್ಧವಾಗಿದೆ
ಚಂದ್ರಶೇಖರ್ ಕ್ಷೇತ್ರ ಶಿಕ್ಷಣಾಧಿಕಾರಿ ಮಾಗಡಿ 
ಬಡ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಶಿಕ್ಷಣ ಇಲಾಖೆ ಹೆಚ್ಚಿನ ಗಮನ ಹರಿಸಬೇಕು. ಶತಮಾನ ಕಂಡ ಶಾಲೆಯ ಅಭಿವೃದ್ಧಿ ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಯುವ ಕೆಲಸ ಮಾಡಬೇಕು.
ಚಂದನ ಎಸ್‌ಡಿಎಂಸಿ ಅಧ್ಯಕ್ಷ