ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ| ಗೃಹಲಕ್ಷ್ಮಿ: ವೃದ್ಧರಿಗೆ ಪ್ರತ್ಯೇಕ ಕೌಂಟರ್ ತೆರೆಯಲು ಆಗ್ರಹ

ಆಗ್ರಹ
Published 31 ಜುಲೈ 2023, 14:38 IST
Last Updated 31 ಜುಲೈ 2023, 14:38 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಎಸ್‌ಬಿಐ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡ, ಕರ್ನಾಟಕ ಬ್ಯಾಂಕ್‌, ಕಾವೇರಿ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಸರ್ಕಾರದ ಗ್ಯಾರಂಟಿಗಳ ಹಣ ಪಡೆಯಲು ಜನಸಾಮಾನ್ಯರಿಂದ ಇಡೀ ದಿನ ನೂಕುನುಗ್ಗಲು ಉಂಟಾಯಿತು.

ಬ್ಯಾಂಕ್ ಸಿಬ್ಬಂದಿ ಕರ್ತವ್ಯ ಮಾಡಲು ಆಗುತ್ತಿಲ್ಲ. ಬ್ಯಾಂಕ್‌ಗಳಲ್ಲಿ ಆಧಾರ್‌ ಲಿಂಕ್‌ ಮಾಡಿಸಲು, ಅನ್ನಭಾಗ್ಯದ ಹಣ ಖಾತೆಗೆ ಬಂದಿದೆಯೇ ಎಂದು ಪರೀಕ್ಷಿಸಲು, ನೂತನ ಅಕೌಂಟ್‌ ಮಾಡಿಸಲು ಜನ ಮುಗಿಬಿದ್ದರು.

ಬ್ಯಾಂಕ್‌ನ ಹೊರಗೆ ಕೂಡ ಸರದಿಯಲ್ಲಿ ಮುದುಕರು, ಮಹಿಳೆಯರು ನಿಂತಿದ್ದಾರೆ. ಬ್ಯಾಂಕ್‌ಗಳಲ್ಲಿ ಸರ್ವರ್‌ ಸಮಸ್ಯೆ ಸರ್ವೆ ಸಾಮಾನ್ಯವಾಗಿದೆ. ಸರದಿಯಲ್ಲಿ ನಿಂತವರ ನಡುವೆ ಜಗಳ ತಳ್ಳಾಟ ನಡೆದಿದೆ. ಗೃಹಲಕ್ಷ್ಮಿ ಹಣ ಪಡೆಯಲು ನೋಂದಣಿ ಮಾಡಿಸಲು ಇನ್ನೂ ಸಮಯವಿದೆ ಎಂದರೂ ಯಾರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಸರ್ಕಾರ ಘೋಷಿಸಿರುವ ಗ್ಯಾರಂಟಿ ಅನುಷ್ಠಾನಗೊಳಿಸುವಲ್ಲಿಹೈರಾಣಾಗಿದ್ದೇವೆ ಎಂದು ಬ್ಯಾಂಕ್‌ಗಳ ಸಿಬ್ಬಂದಿ ಅಳಲು ತೋಡಿಕೊಂಡರು.

ವೃದ್ಧರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೌಂಟರ್‌ ತೆರೆದು ನೋಂದಣಿ ಮಾಡಿಸಬೇಕು ಎಂದು ಜಯಮ್ಮ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT