ಮಾಗಡಿ : ಪಟ್ಟಣದ ಕೋಟೆ ರಾಮೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು.

ರಥಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ತಹಶೀಲ್ದಾರ್ ಶರತ್ ಕುಮಾರ್, ‘ಕೆಂಪೇಗೌಡರ ಕಾಲದ ಕೋಟೆ ರಾಮೇಶ್ವರ ದೇವಾಲಯವು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಕೋಟೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿದ್ದು, ರಾಮೇಶ್ವರ ದೇವಾಲಯಕ್ಕೆ ಮೂಲಸೌಲಭ್ಯ ಕಲ್ಪಿಸಲಾಗುತ್ತಿದೆ. ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಕೋಟೆ ರಾಮೇಶ್ವರ ಉಭಯ ಅಮ್ಮನವರ ಕನ್ಯಾದಾನ ಪೂಜೆ ನೆರವೇರಿಸಲಾಯಿತು. ಅಲಂಕೃತ ಉತ್ಸವ ಮೂರ್ತಿಗಳನ್ನು ಹೂವಿನಿಂದ ಅಲಂಕೃತವಾಗಿದ್ದ ರಥದ ಮೇಲಿಟ್ಟು ಪೂಜೆ ಸಲ್ಲಿಸಲಾಯಿತು.

ಭಕ್ತರು ಹರಹರ ಮಹದೇವ ಘೋಷಣೆಯೊಂದಿಗೆ ರಥ ಎಳೆದು ಭಕ್ತಿ ಸಮರ್ಪಿಸಿದರು. ಪ್ರಧಾನ ಅರ್ಚಕ ರಾಮಕೃಷ್ಣದೀಕ್ಷಿತ್, ರಾಜಾಯ್ಯಂಗಾರ್, ತಂಡದ ಪುರೋಹಿತರು ಮಂತ್ರಘೋ಼ಷ ಮಾಡಿದರು.

ಟ್ರಸ್ಟ್ ಪದಾಧಿಕಾರಿ ಎಂ.ಜಿ.ಗೋಪಾಲ್, ಕೃಷ್ಣಮೂರ್ತಿ, ಎಂ.ಬಿ.ಶಿವಾನಂದ್, ಡಾ. ಶಿವಕುಮಾರ, ಕೆರೆಬೀದಿ ಈಶ, ಹೊಸಹಳ್ಳಿ ನಾಗರಾಜು, ಶಿವರಾಜು, ದೊಡ್ಡಿ ಜಗದೀಶ್, ಚಂದ್ರಮ್ಮನಂಜಯ್ಯ, ರಾಧಾ, ಜ್ಯೋತಿ ನಂಜುಂಡಸ್ವಾಮಿ, ಸ್ಮಿತಾ ಸುನೀಲ್, ಶಿವಕುಮಾರ್, ಮಾದೇಶ್, ಗಿರೀಶ್, ಜಗದೀಶ್, ಮಾರಣ್ಣ, ಜಿ.ವೆಂಕಟೇಶ್, ಹೊಸಹಳ್ಳಿ ಹನುಮಂತಯ್ಯ, ಕೃಷ್ಣಮೂರ್ತಿ, ವೆಂಕಟೇಶ್ ಮೂರ್ತಿ, ಲಕ್ಷ್ಮಿನಾರಾಯಣ್, ಎಸ್. ಸುಹಾಸ್, ಗೌರಿ, ನಾಗರಾಜು, ನೇತ್ರಾವತಿ ಸುಧೀಂದ್ರ, ಹಾಗೂ ಭಕ್ತರು ಇದ್ದರು. ಚಾಮುಂಡೇಶ್ವರಿ ದೇವಾಲಯದ ಅರ್ಚಕ ಶಂಕರಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.