ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ: ಸೋಲೂರಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

Published : 28 ಸೆಪ್ಟೆಂಬರ್ 2024, 16:03 IST
Last Updated : 28 ಸೆಪ್ಟೆಂಬರ್ 2024, 16:03 IST
ಫಾಲೋ ಮಾಡಿ
Comments

ಮಾಗಡಿ: ಸೋಲೂರು ಹೋಬಳಿಯಲ್ಲಿ 10 ಸಾವಿರಕ್ಕೂ ಹೆಚ್ಚು ಬಿಜೆಪಿ ಸದಸ್ಯತ್ವವನ್ನು ಮಾಡುವ ಗುರಿ ಇದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ.ಸುಧಾಕರ್ ಹೇಳಿದರು.

ಗುಡೇಮಾರನಹಳ್ಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಯಶವಂತಪುರ ವಿಧಾನಸಭಾ ಕ್ಷೇತ್ರ ಇಡೀ ದೇಶದಲ್ಲೇ ಹೆಚ್ಚು ಬಿಜೆಪಿ ಸದಸ್ಯರನ್ನು ನೋಂದಣಿ ಮಾಡಿದ ಕ್ಷೇತ್ರವಾಗಿದ್ದು, ಮಾಗಡಿಯ ಸೋಲೂರು ಕೂಡ ಅತೀ ಹೆಚ್ಚು ಬಿಜೆಪಿ ಸದಸ್ಯರನ್ನು ನೋಂದಣಿ ಮಾಡುವ ಕ್ಷೇತ್ರವಾಗಬೇಕು ಎಂದರು.

ರಾಜ್ಯ ಸರ್ಕಾರ ಸಂಸದರನ್ನು ಪರಿಗಣಿಸುತ್ತಿಲ್ಲ: ರಾಜ್ಯ ಸರ್ಕಾರ ಟೌನ್‌ಶಿಪ್ ವಿಚಾರವಾಗಿ ಸಂಸದರನ್ನು ಕಡೆಗಣಿಸಿದೆ. ಸ್ಥಳೀಯ ಶಾಸಕರು ಹಾಗೂ ಸಂಸದರನ್ನು ಟೌನ್‌ಶಿಪ್, ರಿಂಗ್‌ರೋಡ್ ಯೋಜನೆ ರೂಪಿಸುವಾಗ ಸೌಜನ್ಯಕ್ಕೂ ಪರಿಗಣಿಸಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಸಂಸದರು ಕಿಡಿಕಾರಿದರು.

ರೈಲು ನಿಲ್ದಾಣಕ್ಕೆ ಮನವಿ: ಸಂಸದ ಡಾ.ಕೆ ಸುಧಾಕರ್ ಅವರಿಗೆ ಸ್ಥಳೀಯರು ಮಾಗಡಿ ತಾಲ್ಲೂಕಿನ ಸೋಲೂರು ಹಾಗೂ ತಿಪ್ಪಸಂದ್ರ 2 ಹೋಬಳಿ ಕೇಂದ್ರಗಳಲ್ಲಿ ಬೆಂಗಳೂರು ಹಾಸನ ರೈಲ್ವೆ ಮಾರ್ಗವಿದ್ದು ಎರಡು ನಿಲ್ದಾಣದಲ್ಲೂ ನಿತ್ಯ ಓಡಾಡುವ 12 ರಿಂದ 13 ರೈಲುಗಳ ಪೈಕಿ ಕೇವಲ ಎರಡು ರೈಲುಗಳಿಗೆ ಮಾತ್ರ ನಿಲುಗಡೆ ಅವಕಾಶವಿದೆ. ಎಲ್ಲಾ ರೈಲುಗಳು ಸೋಲೂರು ಹೋಬಳಿ ಕೇಂದ್ರದಲ್ಲಿ ನಿಲುಗಡೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ರೈಲ್ವೆ ಸಚಿವರಿಗೆ ಸಂಸದರು ಮನವರಿಕೆ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದರು.

ಮಾಜಿ ಶಾಸಕ ಎಂ.ವಿ. ನಾಗರಾಜು, ಸಪ್ತಗಿರಿ ಶಂಕರ್ ನಾಯಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಚೌದರಿ, ಸೋಲೂರು ಹೋಬಳಿ ಬಿಜೆಪಿ ಅಧ್ಯಕ್ಷ ಪಿ.ಎಂ. ಮಂಜುನಾಥ್, ಮುಖಂಡರಾದ ಬೃಂಗೇಶ್, ಮೋಟಗಾನಹಳ್ಳಿ ಮಹೇಶ್, ಹೇಮಂತ್ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT