ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಲಿಂಗಯ್ಯರ ಮನೆ ಸ್ಮಾರಕವಾಗಿಸಿ: ಎಚ್.ಡಿ. ಜಯರಾಮ್

Last Updated 13 ಜೂನ್ 2021, 4:50 IST
ಅಕ್ಷರ ಗಾತ್ರ

ಮಾಗಡಿ: ‘ಕವಿ ಡಾ.ಸಿದ್ದಲಿಂಗಯ್ಯ ಅವರು ಬಾಲ್ಯದಲ್ಲಿ ಆಡಿ ಬೆಳೆದ ಮನೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಿ ಅಭಿವೃದ್ಧಿಪಡಿಸುವ ಮೂಲಕ ಕವಿಗೆ ಗೌರವ ಸಲ್ಲಿಸಬೇಕು’ ಎಂದು ಪ್ರಗತಿಪರ ಚಿಂತಕ ಎಚ್.ಡಿ. ಜಯರಾಮ್ ಒತ್ತಾಯಿಸಿದರು.

ಪಟ್ಟಣದ ಹೊಸಪೇಟೆಯಲ್ಲಿ ಅವರು ಬೆಳೆದ ಮನೆಯಂಗಳದಲ್ಲಿ ಶನಿವಾರ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದಲಿಂಗಯ್ಯ ಅವರು ರಚಿಸಿರುವ ಸಾಹಿತ್ಯದ ಎಲ್ಲಾ ಕೃತಿಗಳನ್ನು ಆಂಗ್ಲ ಭಾಷೆಗೆ ಭಾಷಾಂತರಿಸಿ ಅನ್ಯರಾಜ್ಯ ಮತ್ತು ವಿದೇಶಗಳ ಜನತೆ ಓದುವಂತೆ ಮಾಡಬೇಕು. ರಾಷ್ಟ್ರಕವಿ
ಯನ್ನಾಗಿ ಘೋಷಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಶಂಕರ್ ಮಾತನಾಡಿ, ಪಟ್ಟಣದ ಮುಖ್ಯ ಸರ್ಕಲ್‌ವೊಂದಕ್ಕೆ ಸಿದ್ದಲಿಂಗಯ್ಯ ಸರ್ಕಲ್ ಎಂದು ನಾಮಕರಣ ಮಾಡಬೇಕು ಎಂದರು.

ಹೋರಾಟಗಾರ್ತಿ ಶಾಂತಲಾದೇವಿ ಜಯರಾಮ್ ಮಾತನಾಡಿ, ಸಿದ್ದಲಿಂಗಯ್ಯ ರಚಿಸಿರುವ ಸಾಹಿತ್ಯ ಕೃತಿಗಳು ಕನ್ನಡ ಸಾಹಿತ್ಯದ ನೆಲಮೂಲ, ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುತ್ತಿವೆ. ಅವರು ತಳಮೂಲಗಳ ಬೆವರಿನ ಕವಿ ಎಂದು ಬಣ್ಣಿಸಿದರು.

ಮುಖಂಡರಾದ ರಂಗಸ್ವಾಮಿ, ಮಾದೇಶ್‌, ನಾರಾಯಣ, ತಿಮ್ಮರಾಜು, ಬಸವರಾಜ್, ಪುನೀತ್, ಪ್ರಶಾಂತ್, ರಂಗಮ್ಮ, ಗಿರಿಜಮ್ಮ, ಶಿಕ್ಷಕಿ ರಜನಿ, ಪೂರ್ಣಿಮಾ ರಂಗನಾಥ್‌ ಸಿದ್ದಲಿಂಗಯ್ಯ ಅವರ ಬದುಕಿನ ಘಟನೆಗಳನ್ನು ಮೆಲುಕು ಹಾಕಿದರು. ಮುಖಂಡರಾದ ದೇವರಾಜು, ಮುದ್ದರಂಗಯ್ಯ, ನರಸಯ್ಯ, ಜಗದೀಶ್, ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT