ಬುಧವಾರ, ಮೇ 12, 2021
27 °C

ಸಾರಿಗೆ ನೌಕರರ ಹೋರಾಟಕ್ಕೆ ಶಾಸಕ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ‘ಸಾರಿಗೆ ನೌಕರರ ನ್ಯಾಯೋಚಿತ ಬೇಡಿಕೆಗಳನ್ನು ಸರ್ಕಾರ ಕೂಡಲೆ ಈಡೇರಿಸಬೇಕು. ಇಲ್ಲವಾದರೆ ಹೋರಾಟ ಮಾಡುತ್ತೇವೆ’ ಎಂದು ಶಾಸಕ ಎ.ಮಂಜುನಾಥ ಹೇಳಿದರು.

ಸಾರಿಗೆ ನೌಕರರು ಶುಕ್ರವಾರ ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

‘ದುಡಿದ ಕೆಲಸಕ್ಕೆ ಸರಿಯಾದ ವೇತನ ನೀಡಿ ಎಂದು ಕೇಳಿದ ಸಾರಿಗೆ ನೌಕರರ ಮೇಲೆ ಸರ್ಕಾರ ದೌರ್ಜನ್ಯ ನಡೆಸುವುದನ್ನು ನಿಲ್ಲಿಸಬೇಕು. ಸಂಧಾನದ ಮೂಲಕ ಈ ವೇಳೆಗಾಗಲೆ 6ನೇ ವೇತನ ಆಯೋಗ ಜಾಗಿಗೊಳಿಸಬೇಕಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣಗೊಳಿಸುವುದರ ವಿರುದ್ಧ ಹೋರಾಟ ಮಾಡುತ್ತೇವೆ’ ಎಂದರು.

‘ಸೀಗೇಹಳ್ಳಿ ಡಿಪೋ ಮ್ಯಾನೇಜರ್ ನಾಗರಾಜ ಗೌಡ ಮಾಗಡಿಯ ಸಾರಿಗೆ ನೌಕರರಿಗೆ ಇನ್ನಿಲ್ಲದ ಕಿರುಕುಳ ನೀಡುವು
ದನ್ನು ಕೈಬಿಡದಿದ್ದರೆ, ನೌಕರರೊಂದಿಗೆ ಡಿಪೋಗೆ ಮುತ್ತಿಗೆಹಾಕುತ್ತೇವೆ’ ಎಂದರು.

ಸಾರಿಗೆ ನೌಕರರಾದ ಎ.ಸತೀಶ್, ಸುರೇಶ್, ಬಸವರಾಜು, ಪಂಚಾಕ್ಷರಿ, ಅಮ್ಜದ್‌ಖಾನ್‌,, ವಸಂತ ಕುಮಾರ್, ರಾಜು.ಎಂ.ಪ್ರಶಾಂತ್, ಶಿವರುದ್ರಯ್ಯ, ಮುನಯಪ್ಪ, ಆನಂದ ನಾಯ್ಕ್, ಶಿವಣ್ಣ, ಯಲ್ಲಪ್ಪ ಹೊನ್ನಾಳಿ, ಗಿರಿಜಾ, ವಿನಯ, ಪ್ರೇಮಾ, ಜ್ಯೋತಿ, ಮೋಹನ ಕುಮಾರಿ, ಸುಮಿತ್ರಾ, ನಾಗಯ್ಯ, ಇಮಾಮ್ ಸಾಬ್, ನರಸಿಂಹಮೂರ್ತಿ ಸಾರಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಮಾತನಾಡಿದರು. ಅಶೋಕ ಕೊಣ್ಣೂರ, ನಾಗೇಶ್ ಡೆಂಗಿ, ಬಸವರಾಜು, ಏಕಾಏಕಿ ಮಂಗಳೂರಿಗೆ ವರ್ಗಾವಣೆ ಮಾಡಿದ್ದಾರೆ. ರದ್ದುಪಡಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಪುರಸಭೆ ಸದಸ್ಯರಾದ ಎಂ.ಎನ್.ಮಂಜುನಾಥ, ಅನಿಲ್ ಕುಮಾರ್, ಜಯರಾಮು, ಮಾಜಿ ಸದಸ್ಯ ನಯಾಜ್ ಅಹಮದ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.