ರಾಮನಗರ: ಕೋತಿ ಬೇಟೆಯಾಡಿ ಅದನ್ನು ದ್ವಿಚಕ್ರವಾಹನದಲ್ಲಿ ಸಾಗಿಸುತ್ತಿದ್ದ ಆರೋಪಿ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದು, ಆರೋಪಿ ವಾಹನ ಬಿಟ್ಟು
ಪರಾರಿಯಾಗಿದ್ದಾನೆ.
ಹಂದಿಗೊಂದಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ತುಂಬೇನಹಳ್ಳಿ ಗ್ರಾಮದ ಸಮೀಪ ಉಪ ವಲಯ ಅರಣ್ಯಾಧಿಕಾರಿ ಕೆ. ರಾಜು ಗುರುವಾರ ರಾತ್ರಿ ಗಸ್ತು ತಿರುಗುವಾಗ, ವ್ಯಕ್ತಿಯೊಬ್ಬ ಹುಣಸನಹಳ್ಳಿ-ತುಂಬೇನಹಳ್ಳಿ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಕೋತಿ ಕಳೇಬರ ಚೀಲದಲ್ಲಿ ಸುತ್ತಿಟ್ಟುಕೊಂಡು ಹೋಗುತ್ತಿರುವುದು ಕಂಡು ಬಂದಿತು.
ಅರಣ್ಯಾಧಿಕಾರಿ ಸುಮಾರು 3 ಕಿ.ಮೀ ದೂರ ಆರೋಪಿಯ ಬೆನ್ನಟ್ಟಿದ್ದು, ಆರೋಪಿಯು ಬೈಕ್ ಹಾಗೂ ಕೋತಿಯ ಕಳೇಬರವನ್ನು ರಸ್ತೆಯಲ್ಲೇ ಬಿಟ್ಟು ಪರಾರಿ ಆಗಿದ್ದಾನೆ.
ಬೇಟೆಗೆ ಬಳಸಿದ್ದ ಬಲೆ, ಮಚ್ಚು, ಕೋತಿ ಕಳೇಬರ, ದ್ವಿಚಕ್ರವಾಹನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವನ್ಯಜೀವಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.