ಹಾರೋಹಳ್ಳಿ: ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ರಾಷ್ಟ್ರೀಯ ಹೆದ್ದಾರಿ ಅಪಘಾತಗಳ ಹಾಟ್ ಸ್ಪಾಟ್ ಆಗಿ ಬದಲಾಗುತ್ತಿದೆ. ಒಂದು ವರ್ಷದಲ್ಲಿ 131 ಅಪಘಾತ ಪ್ರಕರಣ ದಾಖಲಾಗಿದೆ. 37 ಮಂದಿ ಮರಣ ಹೊಂದಿದ್ದಾರೆ. ನೂರಾರು ಮಂದಿ ಗಾಯಗೊಂಡು ಕೈ ಕಾಲು ಕಳೆದುಕೊಂಡಿದ್ದಾರೆ.

ಬೆಂಗಳೂರಿಗೆ ಸಮೀಪದಲ್ಲಿರುವ ಹಾರೋಹಳ್ಳಿ ತಾಲ್ಲೂಕು ಕೇಂದ್ರವಾದ ನಂತರ ಬೆಳವಣಿಗೆಗೆ ವೇಗ ಸಿಕ್ಕಿದಂತಾಗಿದೆ. ಕೈಗಾರಿಕೆ ಪ್ರಾರಂಭವಾದ ಬೆನ್ನಲ್ಲೇ ಖಾಸಗಿ ವಿಶ್ವವಿದ್ಯಾಲಯಗಳು ಕೂಡ ಸ್ಥಾಪನೆಯಾಗಿದೆ. ಇದರಿಂದ ವಾಹನಗಳ ಸಂಚಾರ ಹೆಚ್ಚಿದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಂಡಿದೆ.

ಒಂದು ವರ್ಷದ ಅವಧಿಯಲ್ಲಿ ಒಟ್ಟಾರೆ ದಾಖಲಾಗಿರುವ ಪ್ರಕರಣಗಳಲ್ಲಿ ಅರ್ಧದಷ್ಟು ಅಪಘಾತ ಪ್ರಕರಣಗಳೇ ದಾಖಲಾಗಿದೆ. ವಾರದಲ್ಲಿ ಕನಿಷ್ಠ ಎರಡರಿಂದ ಮೂರು ಅಪಘಾತ ನಡೆಯುತ್ತಿವೆ. 2025-26ನೇ ಸಾಲಿನಲ್ಲಿ ಒಟ್ಟಾರೆ 347 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಕಳ್ಳತನ, ಭೂವ್ಯಾಜ್ಯ ಸೇರಿದಂತೆ ಬೇರೆ ಬೇರೆ ಅಪರಾಧ ಚಟುವಟಿಕೆ ಪ್ರಕರಣ ಅರ್ಧದಷ್ಟು ದಾಖಲಾದರೆ, ಉಳಿದವರು ಅಪಘಾತ ಪ್ರಕರಣಗಳೇ ಆಗಿವೆ.

ಮೂಲಗಳ ಪ್ರಕಾರ ರಾಷ್ಟ್ರೀಯ ಹೆದ್ದಾರಿ 209ರಲ್ಲಿ 2025 ಜನವರಿಯಿಂದ ಸೆಪ್ಟೆಂಬರ್ವರೆಗೆ 443 ಅಪಘಾತಗಳ ಪೈಕಿ 184 ಮಂದಿ ಮೃತಪಟ್ಟು 896 ಮಂದಿ ಗಾಯಗೊಂಡಿದ್ದಾರೆ.

ನೆರೆಯ ರಾಜ್ಯಗಳಿಂದಲೂ ವಲಸೆ ಬರುವ ಕಾರ್ಮಿಕರ ಸಂಖ್ಯೆಯು ಹೆಚ್ಚಾಗುತ್ತಿದೆ. ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ದಯಾನಂದ ಸಾಗರ್ ಮೆಡಿಕಲ್ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಹಲಗೂರು, ಕನಕಪುರ, ರಾಮನಗರ, ಬೆಂಗಳೂರು ಸೇರಿದಂತೆ ಹಾರೋಹಳ್ಳಿ ಸುತ್ತಮುತ್ತಲ ಗ್ರಾಮಗಳಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಿದೆ. ಜನಸಂಖ್ಯೆ ಹೆಚ್ಚಾದಂತೆ ಈ ಭಾಗದಲ್ಲಿ ವಾಹನಗಳ ಸಂಚಾರ ಏರಿಕೆಯಾಗಿದೆ.

ಕೈಗಾರಿಕಾ ಪ್ರದೇಶ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನ, ಕಾರು, ಗೂಡ್ಸ್ ವಾಹನಗಳ ನಡುವೆ ಅಪಘಾತಗಳಾಗುತ್ತಿವೆ. ಕೆಲವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುತ್ತಿದ್ದಾರೆ. ಇನ್ನು ಕೆಲವರು ಕೈಕಾಲು ಕಳೆದುಕೊಂಡು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಎಷ್ಟೋ ಕುಟುಂಬಗಳು ಆಧಾರ ಸ್ತಂಭ ಕಳೆದುಕೊಂಡು ಬೀದಿಪಾಲಾಗುತ್ತಿವೆ.

ಇನ್ನು ಬೆಂಗಳೂರಿನಿಂದ ದಿಂಡಿಗಲ್ರೆಗೆ ಸಂಪರ್ಕಿಸುವ ರಸ್ತೆ ಗುಣಮಟ್ಟದ ಬಗ್ಗೆ ಮೊದಲಿನಿಂದಲೂ ಅಪಸ್ವರ ಇದೆ. ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಅಗತ್ಯವಿರುವ ಕಡೆ ಸುರಕ್ಷತಾ ನಿಯಮ ಕೈಗೊಂಡಿಲ್ಲ. ಅಪಘಾತ ವಲಯ ಗುರುತಿಸಿಲ್ಲ. ನಾಮಫಲಕ ಅಳವಡಿಸುವ ಕೆಲಸ ಮಾಡಿಲ್ಲ. ಹೈಮಾಸ್ಟ್ ದೀಪ ಹಲವು ಕಡೆ ಅಳವಡಿಸಿಲ್ಲ. ರಸ್ತೆ ಮೇಲೆ ವಾಹನ ಸಾಗಬೇಕಾದ ಲೇನ್ಗಳ ಪಟ್ಟಿ ಹಾಕಿಲ್ಲ. ವೇಗ ನಿಯಂತ್ರಕಗಳಾದ ಹಂಪ್ಗಳಿಗೆ ಬಣ್ಣ ಇನ್ನೂ ಬಳಸಿಲ್ಲ.

ಹತ್ತಾರು ಸಮಸ್ಯೆ ಕೇಳಿ ಇದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲೀ ಅಥವಾ ರಸ್ತೆ ನಿರ್ವಹಿಸುತ್ತಿರುವ ಗುತ್ತಿಗೆದಾರರು ಮಾಡುತ್ತಿಲ್ಲ. ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬ ರೀತಿ ವರ್ತಿಸುತ್ತಿದ್ದಾರೆ.

ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು. ಸಂಚಾರ ನಿಯಮ ಪಾಲಿಸುವುದರ ಮೂಲಕ ಬದ್ಧತೆ ಮೆರೆಯಬೇಕು. ಈ ಬಗ್ಗೆ ಹಲವು ಬಾರಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ
ಕೆ.ಮಲ್ಲೇಶ್. ಇನ್ಸ್ಪೆಕ್ಟರ್ ಹಾರೋಹಳ್ಳಿ ಠಾಣೆ

ಸಂಚಾರ ಠಾಣೆಯಾಗಲಿ

ತಾಲ್ಲೂಕು ಕೇಂದ್ರವಾಗಿ ನಾಲ್ಕು ವರ್ಷ ಕಳೆದಿದೆ. ತಾಲ್ಲೂಕಿನಲ್ಲಿ ಒಂದು ಠಾಣೆ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಈ ಭಾಗದಲ್ಲಿ ಸಂಚಾರ ನಿಯಮ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಅಪಘಾತ ತಗ್ಗಿಸಿ ಜೀವ ಹಾನಿ ತಡೆಗಟ್ಟುವ ಕೆಲಸ ಆಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.