ಚನ್ನಪಟ್ಟಣ: ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಶುಕ್ರವಾರ (ಆ.23) ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರವಾಸ ನಡೆಸಲಿದ್ದಾರೆ.
ತಾಲ್ಲೂಕಿನ ಕೆಂಗಲ್ ನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಲಿರುವ ನಿಖಿಲ್ ನಂತರ ಸರಗೂರುದೊಡ್ಡಿ, ಹನುಮಂತನಗರ, ಪೌಳಿದೊಡ್ಡಿ, ವಂದಾರಗುಪ್ಪೆ, ಕರಿಕಲ್ ದೊಡ್ಡಿ, ಕೆರೆಮೇಗಲದೊಡ್ಡಿ, ಕೆಂಚಯ್ಯನದೊಡ್ಡಿ, ಮುನಿಯಪ್ಪನದೊಡ್ಡಿ, ಲಾಳಾಘಟ್ಟ, ಮುಂತಾದೆಡೆ ಪ್ರವಾಸ ನಡೆಸಲಿದ್ದಾರೆ ಎಂದು ತಾಲ್ಲೂಕು ಜೆಡಿಎಸ್ ಪ್ರಕಟಣೆ ತಿಳಿಸಿದೆ.