ಶನಿವಾರ, ಸೆಪ್ಟೆಂಬರ್ 18, 2021
30 °C

ಅಂಗವಿಕಲ ಯುವಕನಿಗೆ ಥಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಇಲ್ಲಿನ ರೆಹಮಾನಿಯಾ ನಗರದ ಸಯ್ಯದ್ ತೌಸಿಫ್‌ (18) ಎಂಬ ಅಂಗವಿಕಲ ಯುವಕನಿಗೆ ಮನಬಂದಂತೆ ಥಳಿಸಲಾಗಿದ್ದು, ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರಾಮನಗರ ಟೌನ್‌ ಪೊಲೀಸರು ಹೀಗೆ ಯುವಕನಿಗೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಾಯಗೊಂಡ ಯುವಕ ಬುದ್ಧಿಮಾಂದ್ಯ ಎಂದೂ ಹೇಳಲಾಗಿದೆ. ಆದರೆ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಯುವಕನ ಮೈ ಮೇಲೆ ಆಗಿರುವ ಗಾಯಗಳ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಆದದ್ದೇನು: ಪೊಲೀಸರ ಪ್ರಕಾರ, ಕೆಲವು ದಿನದ ಹಿಂದೆ ತೌಸಿಫ್‌ ಹಾಗೂ ಆತನ ಇಬ್ಬರು ಗೆಳೆಯರು ನಗರದ ಮಹಿಳಾ ವಸತಿ ನಿಲಯವೊಂದರ ಮುಂದೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ಸಂದರ್ಭ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಉಳಿದ ಇಬ್ಬರು ಸ್ಥಳದಿಂದ ಪರಾರಿ ಆಗಿದ್ದಾರೆ. ತೌಸಿಫ್‌ ಸಿಕ್ಕಿ ಬಿದ್ದಿದ್ದು, ಆ ಸಂದರ್ಭ ಪೊಲೀಸರು ಲಾಠಿಯಿಂದ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ತೌಸಿಫ್ ಈ ಹಿಂದೆಯೂ ಹಾಸ್ಟೆಲ್‌ ಮುಂಭಾಗ ಹೀಗೆ ಅಸಭ್ಯವಾಗಿ ವರ್ತಿಸಿದ್ದು, ಅಲ್ಲಿನ ನಿಲಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ. ಹಲ್ಲೆಗೆ ಒಳಗಾದ ಯುವಕನ ಪೋಷಕರು ದೂರು ನೀಡದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರೂ ಯಾವುದೇ ದೂರು ದಾಖಲಿಸಿಕೊಂಡಿಲ್ಲ.

* ಥಳಿತಕ್ಕೆ ಒಳಗಾದ ಎನ್ನಲಾದ ಯುವಕನ ಪೋಷಕರು ದೂರು ನೀಡಿಲ್ಲ. ನೀಡಿದರೆ ಪರಿಶೀಲಿಸಿ ಕ್ರಮ ಜರುಗಿಸುತ್ತೇನೆ
ಬಿ. ರಮೇಶ್‌
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.