ಕನಕಪುರ: ನಗರದ ಸಂಗಮ ರಸ್ತೆಯಲ್ಲಿರುವ ಧರ್ಮರಾಯಸ್ವಾಮಿ, ಆದಿಶಕ್ತಿ ದ್ರೌಪದಮ್ಮ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗುರುವಾರದಿಂದ ಸಿದ್ಧತೆಗಳು ಪ್ರಾರಂಭವಾಗಿವೆ.

27ನೇ ವರ್ಷಗಳಿಂದ ದೇವಾಲಯ ಸಮಿತಿ ಕರಗ ಶಕ್ತ್ಯೋತ್ಸವ ನಡೆಸಿಕೊಂಡು ಬಂದಿದೆ. ಈ ಬಾರಿಯು ಕರಗೋತ್ಸವ ಮೇ 15ರಿಂದ ಪ್ರಾರಂಭಗೊಂಡು ಮೇ 24ಕ್ಕೆ ಮುಕ್ತಾಯವಾಗಲಿದೆ.

ಮೇ 15ರಂದು ಧ್ವಜಾರೋಹಣ, ಹೋಮ ಹವನಾದಿ ಹಾಗೂ ವಿಶೇಷ ಪೂಜೆ, 16ರಂದು ಅರಿಸಿನ ಅಲಂಕಾರ, 17 ರಂದು ಕುಂಕುಮ ಅಲಂಕಾರ, 18ರಂದು ಹೂವಿನ ಅಲಂಕಾರ, 19ರಂದು ಶ್ರೀಗಂಧದ ಅಲಂಕಾರ, 20ರಂದು ಕಲ್ಯಾಣೋತ್ಸವ ಮತ್ತು ಆರತಿ ದೀಪಗಳು ಹಾಗೂ ಅನ್ನ ಸಂತರ್ಪಣೆ ನಡೆಯಿತು.

ಮೇ 21ರ ಮಂಗಳವಾರ ರಾತ್ರಿ ಹಸಿ ಕರಗೋತ್ಸವ ನಡೆಯಿತು. 22ರ ಬುಧವಾರ ರಾತ್ರಿ ಶ್ರೀಲಕ್ಕಿ ಅಲಂಕಾರ ವಿಶೇಷ ಪೂಜೆ ಹಾಗೂ 23ರ ಗುರುವಾರ ರಾತ್ರಿ ಬುದ್ಧ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ಪ್ರಾರಂಭಗೊಂಡಿತು.

ಮನೆಯ ಮುಂಭಾಗದಲ್ಲಿ ವಿಶೇಷವಾಗಿ ಬಣ್ಣ ಬಣ್ಣದ ರಂಗು ರಂಗಿನ ರಂಗೋಲಿ ಹಾಗೂ ಹೂವಿನ ಅಲಂಕಾರ ಮಾಡಿದ್ದಾರೆ. ಧರ್ಮರಾಯಸ್ವಾಮಿ, ಆದಿಶಕ್ತಿ ದ್ರೌಪದಮ್ಮನವರ ದೇವಾಲಯದ ಸೇವಾ ಸಮಿತಿ ಹಾಗೂ ಮುಖಂಡರು ವಹ್ನಿಕುಲ ಕ್ಷತ್ರಿಯ ಸಮಾಜದ ಮುಖಂಡರು ಕರಗದ ನೇತೃತ್ವ ವಹಿಸಿದ್ದಾರೆ. ವಕ್ಕಲೇರಿ ರಘು ಮತ್ತು ಶ್ರೀನಿವಾಸ್ ಹೂವಿನ ಕರಗವನ್ನು ನಡೆಸಿಕೊಡಲಿದ್ದಾರೆ.

ಗ್ರಾಮದ ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಕರಗ ಉತ್ಸವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.