ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಡಮಾರನಹಳ್ಳಿ ಡೇರಿಗೆ ಅಧ್ಯಕ್ಷ, ಉಪಾಧ್ಯಕ್ಷೆ ಆಯ್ಕೆ

Published 18 ಡಿಸೆಂಬರ್ 2023, 16:16 IST
Last Updated 18 ಡಿಸೆಂಬರ್ 2023, 16:16 IST
ಅಕ್ಷರ ಗಾತ್ರ

ಹಾರೋಹಳ್ಳಿ: ತಾಲ್ಲೂಕಿನ ಮೇಡಮಾರನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಟಿ. ಕುಮಾರ್ ಹಾಗೂ ಉಪಾಧ್ಯಕ್ಷೆಯಾಗಿ ತಿಮ್ಮಮ್ಮ ಅವಿರೋಧವಾಗಿ ಸೋಮವಾರ ಆಯ್ಕೆಯಾಗಿದ್ದಾರೆ. 

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ತಿಮ್ಮಮ್ಮ ಬಿಟ್ಟರೆ ಉಳಿದವರಾರು ನಾಮಪತ್ರ ಸಲ್ಲಿಸಲಿಲ್ಲ. ಹಾಗಾಗಿ, ಕುಮಾರ್ ಮತ್ತು ತಿಮ್ಮಮ್ಮ ಅವರನ್ನು ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ  ಎಂದು  ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಇಲಾಖೆಯ ನಾಗೇಶ್ ಅವರು  ಘೋಷಿಸಿದರು.

ನೂತನ ಅಧ್ಯಕ್ಷ ಟಿ.ಕುಮಾರ್ ಮಾತನಾಡಿ, ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಎರಡನೇ ಬಾರಿ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ.  ಹೈನುಗಾರರ ಶ್ರೇಯೋಭಿವೃಧ್ಧಿಗೆ ದುಡಿಯುತ್ತೇನೆ. ಕಳೆದ ಐದು ವರ್ಷ ನನ್ನಿಂದ ಯಾವುದೇ ಕಾರ್ಯ ಸಾಧ್ಯವಾಗದಿದ್ದರೂ ನನ್ನ ಮೇಲೆ ವಿಶ್ವಾಸವಿಟ್ಟು ಜನರು ಮತ್ತೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಮುಂದಿನ ಐದು ವರ್ಷ ಹೈನುಗಾರರಿಗೆ ತಲುಪಬೇಕಾದ ಸೌಲಭ್ಯಗಳನ್ನು ತಲುಪಿಸಿ, ಹಾಲು ಉತ್ಪಾದನೆ ಕಡೆ ಹೆಚ್ಚು ಗಮನ ನೀಡಿ ಹೈನುಗಾರರು ಆರ್ಥಿಕವಾಗಿ ಅಭಿವೃಧ್ಧಿ ಹೊಂದುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಂಘದ ಅಭಿವೃಧ್ಧಿಗೆ ಪ್ರತ್ಯೇಕ ಸಮಯ ಮೀಸಲಿಡಲಾಗುವುದು. ಪ್ರತಿವರ್ಷ ಬಡವರನ್ನು ಗುರುತಿಸಿ  ಸ್ವಂತ ಹಣದಲ್ಲಿ ಉಚಿತವಾಗಿ ಹಸು ವಿತರಿಸುತ್ತೇನೆ ಎಂದರು.

ನಿರ್ದೇಶಕರಾದ ಮಂಜುನಾಥ್, ವೆಂಕಟಾಚಲಯ್ಯ, ಕುಮಾರ್, ಆದಿಷ ಮೂರ್ತಿ,  ಶಿವಣ್ಣ, ರೇವಮ್ಮ, ಗಿರಿಯಮ್ಮ ರವಿಕುಮಾರ್, ಆಂಜನಪ್ಪ, ರಂಗಸ್ವಾಮಯ್ಯ, ಮುಖಂಡರಾದ ಜೆಸಿಬಿ ಮಧು, ಶ್ರೀನಿವಾಸ್, ಮಂಜು, ಪ್ರಶಾಂತ್, ಅಜಯ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವರುದ್ರ, ಮುನಿರಾಜು, ಗೋವಿಂದು, ಶ್ರೀನಿವಾಸ್, ಮೇಡಮರನಹಳ್ಳಿ ನವೀನ್, ರಾಜು ವಿ. ಇನ್ನಿತರರು ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT