ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌ ರಾಜ್‌ಕುಮಾರ್ ಸೇವೆ ಸ್ಮರಣೆ

Last Updated 8 ನವೆಂಬರ್ 2021, 7:16 IST
ಅಕ್ಷರ ಗಾತ್ರ

ಮಾಗಡಿ: ‘ವರನಟ ಡಾ.ರಾಜ್‌ಕುಮಾರ್‌ ಎಂದರೆ ಎಲ್ಲರಿಗೂ ಅಪಾರ ಗೌರವವಿದೆ. ಹೊಸಬರಿಗೆ ಬಿಸಿ ಅಪ್ಪುಗೆ ನೀಡುತ್ತಿದ್ದ ನಟ ಪುನೀತ್‌ ರಾಜ್‌ಕುಮಾರ್‌ ಅವರ ಸಮಯಪಾಲನೆಯನ್ನು ನಾವೆಲ್ಲರೂ ಪಾಲಿಸೋಣ’ ಎಂದು ಮುಖಂಡ ರಾಮಕೃಷ್ಣಯ್ಯ ತಿಳಿಸಿದರು.

ಗುಮ್ಮಸಂದ್ರದಲ್ಲಿ ಭಾನುವಾರ ಯುವಕರ ಕ್ರೀಡಾ ಮತ್ತು ಕಲಾ ಸಂಘದಿಂದ ನಡೆದ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಸ್ಮರಣೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್‌ಕುಮಾರ್‌ ಅವರ ‘ಬಂಗಾರದ ಮನುಷ್ಯ’, ‘ಸತ್ಯ ಹರಿಶ್ಚಂದ್ರ’, ‘ಎರಡು ಕನಸು’ ಸಿನಿಮಾಗಳನ್ನು ನೋಡಿ ಬದುಕು ಕಟ್ಟಿಕೊಂಡೆವು. ಅವರ ನಟನಾ ಕೌಶಲವನ್ನು ಮೈಗೂಡಿಸಿಕೊಂಡಿದ್ದ ಪುನೀತ್‌ ಅವರ ಸಿನಿಮಾಗಳಲ್ಲಿ ರಾಜಣ್ಣ ಅವರನ್ನು ಕಾಣುತ್ತಿದ್ದೆವು ಎಂದು ಸ್ಮರಿಸಿದರು.

ದೇವರು ಇಷ್ಟುಬೇಗ ಬಡವರಿಗೆ ನೆರವು ನೀಡುತ್ತಿದ್ದ ಪುನೀತ್‌ ಅವರನ್ನು ಕರೆದುಕೊಳ್ಳಬಾರದಿತ್ತು. ಅವರು ಮಾಡುತ್ತಿದ್ದ ನಿಸ್ವಾರ್ಥ ಸೇವೆಯಲ್ಲಿ ಸಾಸಿವೆ ಕಾಳಿನಷ್ಟಾದರೂ ಮಾಡುವ ಮೂಲಕ ನಮ್ಮ ಬದುಕಿನಲ್ಲಿ ಅವರನ್ನು ಸ್ಮರಿಸಬೇಕಿದೆ ಎಂದರು.

ಗ್ರಾ.ಪಂ. ಸದಸ್ಯೆ ಕಲಾ ಶ್ರೀನಿವಾಸ್‌, ಮುಖಂಡರಾದ ಶಿವಣ್ಣ, ರಾಮಣ್ಣ, ನಾಗಣ್ಣ, ಗಂಗರೇವಣ್ಣ, ದೇವರಾಜ್‌, ಲಕ್ಷ್ಮಣ್‌ ಮಾತನಾಡಿದರು. ನಿವೃತ್ತ ಯೋಧ ಚಲುವನಾರಾಯಣ್‌ ಅವರನ್ನು ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳಾದ ಮುನಿರಾಜು, ರವಿಕುಮಾರ್‌, ಕೃಷ್ಣಮೂರ್ತಿ, ಸುರೇಶ್‌, ಪ್ರಕಾಶ್‌, ಪ್ರವೀಣ್‌, ರಮೇಶ್‌, ಕೆಂಪರಾಜು, ಪ್ರಸನ್ನ, ಚರಣ್‌, ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT