ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಟಿ -ಬಿಟಿ ಜನರಿಗೂ ಪೂರ್ಣಚಂದ್ರ ತೇಜಸ್ವಿ ಅಂದರೆ ಕುತೂಹಲ: ಗಂಗಾಧರ್

ಮನೆಯಂಗಳದಲ್ಲಿ ತೇಜಸ್ವಿ ಜನ್ಮದಿನ
Published : 8 ಸೆಪ್ಟೆಂಬರ್ 2024, 13:53 IST
Last Updated : 8 ಸೆಪ್ಟೆಂಬರ್ 2024, 13:53 IST
ಫಾಲೋ ಮಾಡಿ
Comments

ಮಾಗಡಿ: ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನೋತ್ಸವವನ್ನು ಮಾಗಡಿ ಮುಖ್ಯ ರಸ್ತೆ ತಾವರೆಕೆರೆ ಶಿಕ್ಷಕ ಚಿಕ್ಕವೀರಯ್ಯ ಅವರ ಮನೆಯಲ್ಲಿ ಸಂವಾದ ಕಾರ್ಯಕ್ರಮ ನಡೆಸುವ ಮೂಲಕ ಸರಳವಾಗಿ ಆಚರಿಸಲಾಯಿತು.

ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸರ್ವಕಾಲಿಕ ಲೇಖಕರು ಎಂದರು.

20ನೇ ಶತಮಾನದ ಅತ್ಯಂತ ಯಶಸ್ವಿ ಮತ್ತು ಪ್ರಭಾವಿ ಲೇಖಕರಲ್ಲಿ ಪ್ರಮುಖರು. ಸಂಗೀತಭ್ಯಾಸ, ಮೀನು ಶಿಕಾರಿ, ಫೋಟೊಗ್ರಫಿ ತಿರುಗಾಟ ಹೀಗೆ ಹಲವು ಅಭ್ಯಾಸಗಳನ್ನು ಅಭಿರುಚಿಯಾಗಿ ಪಡೆದಿದ್ದ ತೇಜಸ್ವಿ, ಸರ್ವಕಾಲಿಕ ಬರಹಗಾರರಾಗಿ ಗಮನ ಸೆಳೆಯುತ್ತಾರೆ. ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಮಾಯಾಲೋಕ, ಪರಿಸರ ಕಥೆಗಳು ಸಾಹಿತ್ಯದ ಪ್ರಮುಖ ಕೃತಿಗಳು.

ಅಬಚೂರಿನ ಫೋಸ್ಟ್ ಆಫೀಸು, ತಬರನ ಕಥೆ, ಕುಬಿ ಮತ್ತು ಇಯಾಲ ಕಥೆಗಳನ್ನು ಆಧರಿಸಿದ ಚಲನಚಿತ್ರಗಳು ರಾಜ್ಯ, ರಾಷ್ಟ್ರ ಹಾಗೂ ಸ್ವರ್ಣ ಕಮಲ ಪ್ರಶಸ್ತಿ ಪಡೆದು ಶ್ರೇಷ್ಠತೆ ಉಳಿಸಿಕೊಂಡಿವೆ. ಇಂತಹ ವಿಶಿಷ್ಟ ವ್ಯಕ್ತಿಯನ್ನು ಮನೆಯಂಗಳದಲ್ಲಿ ಸ್ಮರಿಸುವುದು ಹೆಮ್ಮೆ ವಿಚಾರ ಎಂದರು.

ಶಿರಾ ತಾಲೂಕಿನ ಬುಕ್ಕಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಗಂಗಾಧರ್ ಮಾತನಾಡಿ, ಇವತ್ತೀನಿ ಐಟಿ, ಬಿಟಿ ಉದ್ಯೋಗಸ್ಥರು ತೇಜಸ್ವಿ ಎಂದರೆ ಅತ್ಯಂತ ಕುತೂಹಲದಿಂದ ಗಮನಿಸುತ್ತಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಿರೀಶ್, ಸೇಂಟ್ ಮಥಾಸ್ ಕೃಷ್ಣಪ್ಪ,
ಶಿಕ್ಷಕರಾದ ರುದ್ರಮುನಿ, ರೇವಣಸಿದ್ದಪ್ಪ, ಪೊಲೀಸ್ ಇಲಾಖೆ ರೇಣುಕಪ್ಪ, ತಾಳಕುಪ್ಪೆ ರೇವಣಸಿದ್ದಯ್ಯ, ಕೆಂಗೆನಹಳ್ಳಿ ಪುಟ್ಟರಾಮು, ನಾಗರಾಜು, ದಿವ್ಯ ಪಿ, ವಿದ್ಯಾರ್ಥಿಗಳಾದ ಜ್ಞಾನ, ಅಕ್ಷರ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT