ರಾಮನಗರ: ‘ನಾವೆಲ್ಲರೂ ಮಂದಿರ, ಮಸೀದಿ, ಚರ್ಚ್ನಲ್ಲಿ ದೇವರನ್ನು ಹುಡುಕಿದರೆ, ಪೌರ ಕಾರ್ಮಿಕರು ಸ್ವಚ್ಛತೆಯಲ್ಲೇ ದೇವರನ್ನು ಕಾಣುತ್ತಾರೆ. ಮಳೆ, ಗಾಳಿ, ಚಳಿ, ಬಿಸಿಲು ಲೆಕ್ಕಿಸದೆ ಕೆಲಸ ಮಾಡುವ ಕಾರ್ಮಿಕರು ಕಾಯಕ ಯೋಗಿಗಳು’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಬಣ್ಣಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಗರಸಭೆ ಹಾಗೂ ರಾಜ್ಯ ಪೌರ ನೌಕರರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಕಾರ್ಮಿಕರಿಗೆ ನಿವೇಶನಕ್ಕಾಗಿ ಜಾಗ ಹುಡುಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ’ ಎಂದರು.

‘ನಗರಸಭೆಯಲ್ಲಿ ಕೆಲ ಪೌರ ಕಾರ್ಮಿಕರ ಕಾಯಂಗೆ ಡಿ.ಸಿ ಮುಂದಾಗಬೇಕು. ಕರ್ತವ್ಯದ ಮಧ್ಯೆ ವಿಶ್ರಾಂತಿಗಾಗಿ ಕಾರ್ಮಿಕರಿಗೆ 3 ಕಡೆ ವಿಶ್ರಾಂತಿ ಗೃಹ ಸಿದ್ಧವಾಗುತ್ತಿದ್ದು, ಮನೆಗಳ ದುರಸ್ತಿಗೆ ಸಂಬಂಧಿಸಿದಂತೆ ಸಚಿವರ ಜೊತೆ ಮಾತನಾಡಿದ್ದೇನೆ. ನಗರದಲ್ಲಿ ಹಾದು ಹೋಗಿರುವ ಅರ್ಕಾವತಿ ನದಿಗೆ ಕೆಲವರು ಕೋಳಿ ತ್ಯಾಜ್ಯ ಸೇರಿದಂತೆ ವಿವಿಧ ರೀತಿಯ ಕಸ ತಂದು ಹಾಕುತ್ತಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಇದೇ ವೇಳೆ ಸೂಚಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಪೌರಾಯುಕ್ತ ಡಾ. ಜಯಣ್ಣ, ‘ನಗರದ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಗಮನ ನೀಡಬೇಕು. ಅವರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲು ನಗರಸಭೆ ಬದ್ದವಾಗಿದೆ’ ಎಂದರು.

ಕಾರ್ಯಕ್ರಮಕ್ಕೆ ಮುಂಚೆ ನಗರದ ಜೂನಿಯರ್ ಕಾಲೇಜು ಮೈದಾನದಿಂದ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ನಡೆಯಿತು. ಕಾರ್ಮಿಕರನ್ನು ಸನ್ಮಾನಿಸಿ ಉಡುಗೊರೆ ನೀಡಲಾಯಿತು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಕೆ. ರಾಜು, ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಶಿವಕುಮಾರ ಸ್ವಾಮಿ, ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿ. ವೆಂಕಟೇಶ್, ಶಾಖಾ ಅಧ್ಯಕ್ಷ ಮಾರಪ್ಪ, ಪದಾಧಿಕಾರಿಗಳು ಹಾಗೂ ನಗರಸಭೆ ಸದಸ್ಯರು ಇದ್ದರು.

ನಗರಸಭೆ ಅಧೀಕ್ಷಕ ಶಿವಣ್ಣ ಅತಿಥಿಗಳನ್ನು ಸ್ವಾಗತಿಸಿದರು. ನಟರಾಜೇಗೌಡ ನಿರೂಪಣೆ ಮಾಡಿದರು. ಲಕ್ಷ್ಮಿದೇವಿ ಪ್ರಾರ್ಥನೆ ಹಾಡಿದರು. ಎಚ್.ಸಿ. ಹೊಳಸಾಲಯ್ಯ ಅವರ ತಂಡ ಹಾಡುಗಳನ್ನು ಪ್ರಸ್ತುತಪಡಿಸಿತು.

ನಗರದ ಜೀವಾಳವಾಗಿರುವ ಪೌರ ಕಾರ್ಮಿಕರ ಪೈಕಿ ಹಲವರಿಗೆ ಸ್ವಂತ ಸೂರಿಲ್ಲ. ಅತ್ಯಂತ ಕ್ರಿಯಾಶೀಲರಾಗಿರುವ ಶಾಸಕರು ಮತ್ತು ಜಿಲ್ಲಾಧಿಕಾರಿ ಕಾರ್ಮಿಕರಿಗೆ ಸ್ವಂತ ನೆಲೆ ಒದಗಿಸಬೇಕು

-ಕೆ. ಶೇಷಾದ್ರಿ ಶಶಿ ಸದಸ್ಯ ರಾಮನಗರ ನಗರಸಭೆ

ಸಾರ್ಥಕವೆನಿಸುವ ಕೆಲಸ ಮಾಡುವೆ: ಡಿ.ಸಿ ‘ಸದ್ಯದಲ್ಲೇ ಪೌರ ಕಾರ್ಮಿಕರಿಗೆ ನಿವೇಶನ ಹಂಚಲು ಜಾಗ ಗುರುತಿಸಿ ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗುವುದು. ಸಮಾಜದ ತಳಮಟ್ಟದಲ್ಲಿರುವವರಿಗೆ ಮಾಡುವ ಸೇವೆಯಲ್ಲೇ ನಿಜವಾದ ಸಾರ್ಥಕತೆ ಅಡಗಿದೆ ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಿರುತ್ತಾರೆ. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿ ಮುಂದೊಂದು ದಿನ ನಾನು ಸಹ ನನ್ನ ಮಕ್ಕಳು ಮತ್ತು ಮೊಮ್ಮಕ್ಕಳ ಬಳಿ ಸಾರ್ಥಕ ಕೆಲಸದ ಬಗ್ಗೆ ಹೇಳಿಕೊಳ್ಳುವೆ’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಭರವಸೆ ನೀಡಿದರು. ‘ಕಾರ್ಮಿಕರ ಮಕ್ಕಳಿಗೆ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಒದಗಿಸುವುದಕ್ಕಾಗಿ ಖಾಸಗಿ ಶಾಲೆಗಳ ಪ್ರಾಂಶುಪಾಲರ ಜೊತೆ ಸಭೆ ನಡೆಸುವೆ. ಶಿಕ್ಷಣಕ್ಕೆ ತಗುಲುವ ವೆಚ್ಚವನ್ನು ನಗರಸಭೆಯಿಂದಲೇ ಭರಿಸಲಾಗುವುದು. ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ಪಡೆಯಲು ಕಾರ್ಮಿಕರು ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಬೇಕು. ನೋಂದಣಿಯಾಗಿರುವ ಆಸ್ಪತ್ರೆಗಳ ಮಾಹಿತಿಯನ್ನು ನಗರಸಭೆಯವರು ಕಾರ್ಮಿಕರಿಗೆ ನೀಡಬೇಕು’ ಎಂದು ಸಲಹೆ ನೀಡಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಮನವಿ ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಮಂಡಿಸಿದ ಕರ್ನಾಟಕ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು ‘ವೃಂದ ಮತ್ತು ನೇಮಕಾತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ನೇರಪಾವತಿಯ ಎಲ್ಲಾ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಜಿಲ್ಲೆಯ ಪುರಸಭೆ ಮತ್ತು ನಗರಸಭೆಗಳಲ್ಲಿ ಕಾರ್ಮಿಕರ ನೇಮಕಾತಿಯನ್ನು ಶೇ 100ರಷ್ಟು ಮಾಡಬೇಕು. ರಾಮನಗರ ನಗರಸಭೆಯನ್ನು ಗ್ರೇಡ್- 1 ಆಗಿ ಮೇಲ್ದರ್ಜೆಗೇರಿಸಬೇಕು. ಕಾರ್ಮಿಕರಿಗೆ ವಿಶ್ರಾಂತಿ ಗೃಹ ಕರ್ತವ್ಯಕ್ಕಾಗಿ ಓಡಾಡಲು ವಾಹನ ವ್ಯವಸ್ಥೆ ಜೊತೆಗೆ ಉಪಾಹಾರ ಮೊತ್ತವನ್ನು ₹10ರಷ್ಟು ಹೆಚ್ಚಿಸಬೇಕು. ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಕಾರ್ಮಿಕರ ಮಕ್ಕಳ ಶಾಲಾ ಶುಲ್ಕವನ್ನು ನಗರಸಭೆಯಿಂದಲೇ ಭರಿಸಬೇಕು. ನಗದುರಹಿತ ಚಿಕಿತ್ಸೆ ವ್ಯವಸ್ಥೆ ಮಾಡಬೇಕು. ಅಪಘಾತದಲ್ಲಿ ಮೃತಪಟ್ಟರೆ ₹1 ಕೋಟಿ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.