ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಹಣಕಾಸಿನ ವಿಚಾರ: ಲಾಂಗ್‌ನಿಂದ ಬೆದರಿಕೆ

Published : 23 ಸೆಪ್ಟೆಂಬರ್ 2024, 5:53 IST
Last Updated : 23 ಸೆಪ್ಟೆಂಬರ್ 2024, 5:53 IST
ಫಾಲೋ ಮಾಡಿ
Comments

ರಾಮನಗರ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಜನಪದ ಕಲಾವಿದ ಮುತ್ತುರಾಜು ಎಂಬುವರ ಮನೆಗೆ ನುಗ್ಗಿದ ಯುವಕರ ತಂಡವೊಂದು ಲಾಂಗ್‌ನಿಂದ ಬೆದರಿಸಿ, ಮನೆ ಬಳಿ ದಾಂದಲೆ ನಡೆಸಿದ್ದಾರೆ. ಅದನ್ನು ಪ್ರಶ್ನಿಸಿದ ತಾಯಿ ಕಮಲಮ್ಮ ಅವರ ಜುಟ್ಟು ಹಿಡಿದು ಎಳೆದಾಡಿರುವ ಘಟನೆ ತಾಲ್ಲೂಕಿನ ಸುಗ್ಗನಹಳ್ಳಿಯಲ್ಲಿ ಶನಿವಾರ ನಡೆದಿದೆ.

ಈ ಕುರಿತು ಚನ್ನಪಟ್ಟಣ ತಾಲ್ಲೂಕಿನ ತಗಚಕುಪ್ಪೆಯ ಅಭಿ ಹಾಗೂ ಆತನ ಸಹಚರರ ವಿರುದ್ಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೊ ಕಳ್ಳತನ: ಮುನೆ ಮುಂದೆ ನಿಲ್ಲಿಸಿದ್ದ ಆಟೊವನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಗರದ ವಿಜಯನಗರದ ನೀರಿನ ಘಟಕದ ಬಳಿ ಇತ್ತೀಚೆಗೆ ನಡೆದಿದೆ. ರಮೇಶ ಬಿ.ರು ಆಟೊ ಕಳೆದುಕೊಂಡ ಚಾಲಕ. ಬೆಂಗಳೂರಿನ ವ್ಯಕ್ತಿಯೊಬ್ಬರ ಆಟೊ ಬಾಡಿಗೆಗೆ ಪಡೆದು ಅಲ್ಲೇ ಓಡಿಸುತ್ತಿದ್ದ ರಮೇಶ, ಸೆ. 18ರಂದು ರಾಮನಗರಕ್ಕೆ ಆಟೊ ತಂದಿದ್ದರು.

ರಾತ್ರಿ ಮನೆ ಮುಂದೆ ಆಟೊವನ್ನು ಲಾಕ್ ಮಾಡಿ ನಿಲ್ಲಿಸಿದ್ದರು. ಬೆಳಿಗ್ಗೆ ಎದ್ದು ನೋಡಿದಾಗ ಆಟೊ ಸ್ಥಳದಲ್ಲಿರಲಿಲ್ಲ. ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಕಡೆಗೆ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ಆಟೊ ಮೌಲ್ಯ ₹1 ಲಕ್ಷ ಆಗಿದ್ದು, ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಮನಗರ ಟೌನ್ ಠಾಣೆ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT