ವೇಷಭೂಷಣ ಸ್ಪರ್ಧೆಯಲ್ಲಿ ಗಮನ ಸೆಳೆದ ಬಸವಣ್ಣನ ವೇಷದಲ್ಲಿ ಗಮನ ಸೆಳೆದ ಬಾಲಕ
ಸಂಗೀತ ರಾತ್ರಿ ಕಾರ್ಯಕ್ರಮದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ ನಟಿ ರಾಗಿಣಿ
ರಾಮೋತ್ಸವ ಪ್ರಯುಕ್ತ ನಡೆದ ಸಂಗೀತ ರಾತ್ರಿ ಕಾರ್ಯಕ್ರಮದಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಮಾತನಾಡಿದರು. ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್ ಸಿ.ಪಿ. ಯೋಗೇಶ್ವರ್ ವಿಧಾನ ಪರಿಷತ್ ಸದಸ್ಯ ಎಸ್. ರವಿ ಇದ್ದಾರೆ

ರಾಮೋತ್ಸವವು ಕ್ಷೇತ್ರದ ಜನರನ್ನು ಸಾಂಸ್ಕೃತಿಕವಾಗಿ ಬೆಸೆಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಹಬ್ಬ. ನಾಲ್ಕೂ ದಿನ ನಡೆದ ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಜನ ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ನಮ್ಮ ಹೊಸ ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ
– ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ
ರಾಮನ ಹೆಸರಿನಲ್ಲಿ ಜನರನ್ನು ವಿಭಜಿಸುವ ಕೆಲಸ ನಡೆಯುತ್ತಿದೆ. ಆದರೆ ರಾಮನಗರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ನೇತೃತ್ವದ ಈ ರಾಮೋತ್ಸವವು ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದೆ
– ರಿಜ್ವಾನ್ ಅರ್ಷದ್ ಶಿವಾಜಿನಗರ ಶಾಸಕಸಂಗೀತ ರಾತ್ರಿ ಕಾರ್ಯಕ್ರಮದಲ್ಲಿ ಗಮನ ಸೆಳೆದ ನಟಿ ರಚಿತಾ ರಾಮ್
ನೀನಾಸಂ ಸತೀಶ್ ರಚಿತಾ ರಾಮ್ ಹವಾ!
ಸಿನಿಮಾ ನಟ ಸತೀಶ್ ನೀನಾಸಂ ನಟಿಯರಾದ ರಚಿತಾ ರಾಮ್ ರಾಗಿಣಿ ಸಪ್ತಮಿ ಗೌಡ ಅವರು ಸಂಗೀತ ರಾತ್ರಿಯ ವೇದಿಕೆಗೆ ವಿಶೇಷ ಕಳೆ ತಂದರು. ರಾಗಿಣಿ ಅವರು ಹಾಡೊಂದಕ್ಕೆ ಹೆಜ್ಜೆ ಹಾಕಿ ರಂಜಿಸಿದರು. ಸದ್ಯದಲ್ಲೇ ತೆರೆ ಕಾಣಲಿರುವ ತಮ್ಮ ‘ದ ರೈಸಿಂಗ್ ಅಶೋಕ’ ಸಿನಿಮಾದ ಬಗ್ಗೆ ಸತೀಶ್–ಸಪ್ತಮಿ ಗೌಡ ಮಾತನಾಡಿದರು. ರಚಿತಾ ರಾಮ್ ಮಾತುಗಳು ಪ್ರೇಕ್ಷಕರಿಗೆ ಮುದ ನೀಡಿದವು. ಕಾರ್ಯಕ್ರಮವನ್ನು ಅನುಶ್ರೀ ನಿರೂಪಣೆ ಮಾಡಿದರು.