ರಾಮನಗರ: ಶೀಘ್ರದಲ್ಲೇ ರಾಮೋತ್ಸವ ಆಚರಿಸಲಾಗುವುದು. ಮೊದಲ ಬಾರಿಗೆ ನಡೆಯಲಿರುವ ಉತ್ಸವದಲ್ಲಿ ಸರ್ವ ಜನಾಂಗಗಳು ಪಾಲ್ಗೊಳ್ಳಲಿವೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.

‘ರೇಷ್ಮೆ ನಗರಿಯಲ್ಲಿ ರಾಮೋತ್ಸವ’ ಆಚರಣೆ ಸಂಬಂಧ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕನಕಪುರದಲ್ಲಿ 13 ದಿನ ಕನಕೋತ್ಸವದ ರೀತಿ ಮಾಗಡಿಯಲ್ಲಿ ಕೆಂಪೇಗೌಡ ಉತ್ಸವ, ಚನ್ನಪಟ್ಟಣದಲ್ಲಿ ಬೊಂಬೆ ಉತ್ಸವ ಆಚರಣೆಗೆ ಸಿದ್ಧತೆ ನಡೆದಿವೆ. ಅದೇ ರೀತಿ ರಾಮನಗರದಲ್ಲಿ ರಾಮೋತ್ಸವವನ್ನು 20 ದಿನ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ರಾಮನನ್ನು ಯಾರೂ ಗುತ್ತಿಗೆ ಪಡೆದುಕೊಂಡಿಲ್ಲ. ಜಾತಿ ಧರ್ಮ ಮೀರಿ ನಗರದಲ್ಲಿ ನಡೆಯಲಿರುವ ರಾಮೋತ್ಸವಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು ಮನವಿ ಮಾಡಿದರು.

ರಾಮೋತ್ಸವವು ಸರ್ವ ಧರ್ಮಗಳ ಸಮನ್ವಯತೆ ಸಾಧಿಸುವಂತಾಗಬೇಕು. ಇದೊಂದು ಸೂಕ್ಷ್ಮ ವಿಚಾರವಾಗಿರುವುದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವ್ ಸಲಹೆ ನೀಡಿದರು.

ಕನಕಪುರದಲ್ಲಿ ಪ್ರತಿ ವರ್ಷ ನಡೆಸುವ ಕನಕೋತ್ಸವದಂತೆ ರಾಮನಗರದಲ್ಲಿ ನಡೆಸಲು ಉದ್ದೇಶಿಸಿರುವ ರಾಮೋತ್ಸವ ಯಶಸ್ವಿ ಎಲ್ಲರೂ ಸಹಕಾರ ಕೊಡಬೇಕು ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಎಚ್. ರಾಜು, ಜಯಣ್ಣ, ಸಿಎನ್ ಆರ್ ವೆಂಕಟೇಶ್, ಅಮ್ಜದ್ ಸಾಹುಕಾರ್, ಕಿರಣಗೆರೆ ಜಗದೀಶ್, ಭುಜಂಗಯ್ಯ ರಾಮಕೃಷ್ಣ , ಮೋಹನ್ ಹೊಳ್ಳ ಇದ್ದರು.

20 ದಿನ ಉತ್ಸವ

20 ದಿನಗಳ ರಾಮೋತ್ಸವ ಪ್ರಯುಕ್ತ ರಾಮದೇವರ ಬೆಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗುವುದು. ರಾಮನಗರ ಕ್ಷೇತ್ರದ ಎಲ್ಲಾ ದೇವರ ಮೂರ್ತಿಗಳನ್ನು ನಗರಕ್ಕೆ ತಂದು ಮೆರವಣಿಗೆ ಮಾಡಲಾಗುವುದು. ಎಲ್ಲಾ ದೇಗುಲಗಳಲ್ಲಿ ಏಕಕಾಲಕ್ಕೆ ಹಣತೆ ಹಚ್ಚುವ ಮೂಲಕ ರಾಮೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಹುಸೇನ್ ತಿಳಿಸಿದರು. ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಯುವಜನರಿಗೆ ಕ್ರಿಕೆಟ್ ಕಬಡ್ಡಿ ವಾಲಿಬಾಲ್ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಎಸ್ಎಸ್ಎಲ್ಸಿ ಮತ್ತು ಪಿಯುದಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.