ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುದೂರು: ಅದ್ದೂರಿ ರಾಮೋತ್ಸವ

Published 24 ಜನವರಿ 2024, 7:21 IST
Last Updated 24 ಜನವರಿ 2024, 7:21 IST
ಅಕ್ಷರ ಗಾತ್ರ

ಕುದೂರು: ಅಯೋಧ್ಯೆಯ ರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನಿಮಿತ್ತ ಪಟ್ಟಣದಲ್ಲಿ ಸೋಮವಾರ ಅದ್ದೂರಿಯಾಗಿ ‘ರಾಮೋತ್ಸವ’ ನಡೆಯಿತು.

ಪಟ್ಟಣದ ರಾಮ ಮಂದಿರದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ಶ್ರೀರಾಮ ತಾರಕ ಹೋಮ, ರಾಮ ಭಜನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಅಂಗವಾಗಿ ದೇವಾಲಯವನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ರಾಮನ ಉತ್ಸವ ಮೂರ್ತಿ ನಗರ ಪ್ರದಕ್ಷಿಣೆ ನಡೆಸಲಾಯಿತು. ಈ ವೇಳೆ ನೂರಾರು ರಾಮ ಭಕ್ತರಿಂದ ರಾಮನ ಜಯಘೋಷ ಮುಗಿಲು ಮುಟ್ಟಿತ್ತು. ಈ  ವೇಳೆ ಶಾಲಾ ಮಕ್ಕಳು ರಾಮ, ಲಕ್ಷ್ಮಣ, ಸೀತೆ, ಆಂಜನೇಯ ವೇಷ ಧರಿಸಿ ಮಿಂಚಿದರು.

ಮಹಿಳೆಯರ ತಂಡದಿಂದ ಚಂಡಿವಾದ್ಯ ನಡೆಯಿತು. ರಾಮಲೀಲಾ ಮೈದಾನದಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ಸಂಜೆ ಶಾಲಾ ಮಕ್ಕಳು, ಚರಣ್ ಡ್ಯಾನ್ಸ್ ಅಕಾಡೆಮಿ, ಮಹಿಳಾ ತಂಡದಿಂದ ರಾಮನ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶ್ರೀರಾಮ ಸೇವಾ ಸಮಿತಿಯು ಪಟ್ಟಣದಲ್ಲಿ ದೊಡ್ಡ ಎಲ್‌ಇಡಿ ಪರದೆಯಲ್ಲಿ ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾರವನ್ನು ತೋರಿಸಿದರು.

ಪಟ್ಟಣದ ಪ್ರಮುಖ ಬೀದಿಗಳನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ರಾಮ ಮತ್ತು ಪರಿವಾರ ದೇವತೆಗಳ ಫ್ಲೆಕ್ಸ್‌ ಅಳವಡಿಸಲಾಗಿತ್ತು. ವರ್ತಕರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರ ಕಣ್ಗಾವಲು ಇರಿಸಿದ್ದರು.

ಮನೆ, ವಾಣಿಜ್ಯ ಮಳಿಗೆಗಳ ಮೇಲೆ ಕೇಸರಿ ಬಾವುಟಗಳು ಹಾರಾಡುತ್ತಿದ್ದವು. ಶ್ರೀರಾಮ ದೀಪೋತ್ಸವ ಕಾರ್ಯಕ್ರಮ ನಡೆಯಿತು.

ರಾಮ ಉತ್ಸವ ಮೂರ್ತಿಯನ್ನು ಹೂಗಳಿಂದ ಅಲಂಕರಿಸಿರುವುದು 
ರಾಮ ಉತ್ಸವ ಮೂರ್ತಿಯನ್ನು ಹೂಗಳಿಂದ ಅಲಂಕರಿಸಿರುವುದು 
ರಾಮ ಸೀತೆ ಹನುಮ ವೇಷ ಧರಿಸಿ ಮಿಂಚಿದ ಶಾಲಾ ಮಕ್ಕಳು 
ರಾಮ ಸೀತೆ ಹನುಮ ವೇಷ ಧರಿಸಿ ಮಿಂಚಿದ ಶಾಲಾ ಮಕ್ಕಳು 
ಚಂಡಿವಾದ್ಯ ನುಡಿದ ಮಹಿಳೆಯರು 
ಚಂಡಿವಾದ್ಯ ನುಡಿದ ಮಹಿಳೆಯರು 
ರಾಮಲೀಲಾ ಮೈದಾನದಲ್ಲಿ ಅನ್ನದಾಸೋಹ ನಡೆಯಿತು
ರಾಮಲೀಲಾ ಮೈದಾನದಲ್ಲಿ ಅನ್ನದಾಸೋಹ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT