ಶುಕ್ರವಾರ, ಸೆಪ್ಟೆಂಬರ್ 17, 2021
31 °C

ಬ್ಯಾಲಕೆರೆ ವಿಎಸ್‌ಎಸ್‌ಎನ್‌ ಅಧ್ಯಕ್ಷರಾಗಿ ರವಿಶಂಕರ್‌ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಇಲ್ಲಿನ ಬ್ಯಾಲಕೆರೆ ವಿಎಸ್‌ಎಸ್‌ಎನ್‌ ಗೆ ಅಧ್ಯಕ್ಷರಾಗಿ ರವಿಶಂಕರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ವೆಂಕಟರಂಗಯ್ಯ, ನಿರ್ದೇಶಕರಾದ ಬಸವರಾಜು, ವಿಮಲ, ಯತೀಶ್‌, ಹನುಮಯ್ಯ, ಮರುಳಸಿದ್ದಪ್ಪ, ರೇಣುಕಪ್ಪ, ಮುಕ್ತಿಯಾರ್‌ ಅಹಮದ್‌, ಹಾಲು ಉತ್ಪಾಕದರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ, ತಗ್ಗಿಕುಪ್ಪೆ ಗ್ರಾಮಪಂಚಾಯಿತಿ ಅಧ್ಯಕ್ಷೆ ದೇವರಾಜಮ್ಮ ಮುಕುಂದ, ಸದಸ್ಯರಾದ ನಾಗರತ್ನ, ಆಶಾ ಇದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ನಾಗರತ್ನ ಚಂದ್ರೇಗೌಡ ಮಾತನಾಡಿ ‘ಅರ್ಹ ರೈತರಿಗೆ ಸಾಲ ವಿತರಿಸಬೇಕು. ಯಾವುದೇ ರೈತರನ್ನು ಕಡೆಗಣಿಸದೆ ಸದಸ್ಯತ್ವ ನೀಡಿ, ಸಂಘದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಎಲ್ಲರೂ ಒಗ್ಗೂಡಿ ದುಡಿಯಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು