ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾತನೂರು ಗ್ರಾಮ ಪಂಚಾಯಿತಿಗೆ ಆಯ್ಕೆ

Last Updated 13 ಡಿಸೆಂಬರ್ 2019, 13:55 IST
ಅಕ್ಷರ ಗಾತ್ರ

ಮಾಗಡಿ: ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಡಿ.ಸಿ.ಮೂರ್ತಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗಂಗಾಧರ್‌ ತಿಳಿಸಿದರು. ಚುನಾವಣೆಯ ಫಲಿತಾಂಶ ಪ್ರಕಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಗಿರಿಯಪ್ಪ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಶುಕ್ರವಾರ ಚುನಾವಣೆ ನಡೆಯಿತು. ಕಾಂಗ್ರೆಸ್‌ ಪಕ್ಷದಿಂದ ಗಂಗಮ್ಮ ಮತ್ತು ಜೆಡಿಎಸ್‌ ಪಕ್ಷದ ಡಿ.ಸಿ.ಮೂರ್ತಿ ಅಧ್ಯಕ್ಷರ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದರು. ಮತದಾನ ನಡೆಸಲಾಯಿತು ಎಂದರು.

ಇಬ್ಬರು ಅಭ್ಯರ್ಥಿಗಳು ತಲಾ 6 ರಂತೆ ಮತ ಗಳಿಸಿದರು. ನೋಟಾಕ್ಕೆ 1 ಮತ ಹಾಕಲಾಗಿತ್ತು. ಲಾಟರಿ ಎತ್ತಿದಾಗ ಡಿ.ಸಿ.ಮೂರ್ತಿ ಆಯ್ಕೆಯಾದರು ಎಂದು ತಿಳಿಸಿದರು.

ಡಿ.ಸಿ.ಮೂರ್ತಿ ಮಾತನಾಡಿ, ‘ನನಗೆ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ರಾಜಕೀಯ ಗುರುಗಳು. ಬದಲಾದ ರಾಜಕೀಯ ಹಿನ್ನೆಲೆಯಲ್ಲಿ ನಾನು ಜೆಡಿಎಸ್‌ ಪಕ್ಷ ಸೇರಬೇಕಾಯಿತು. ಇಂದಿನ ಶಾಸಕ ಎ.ಮಂಜುನಾಥ ಮಾರ್ಗದರ್ಶನದಲ್ಲಿ ಉಳಿದ ಐದು ತಿಂಗಳ ಅವಧಿಯಲ್ಲಿ ಕುಡಿಯುವ ನೀರು ಒದಗಿಸಿ, ಇ ಖಾತೆ ಮಾಡಿಸುತ್ತೇನೆ. ಕೇಶಿಪ್‌ ರಸ್ತೆ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದುಹೋಗಿದೆ. ಸದಸ್ಯರೆಲ್ಲರ ಸಹಕಾರದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಪಕ್ಷಾತೀತವಾಗಿ ಮಾಡುತ್ತೇನೆ’ ಅಧ್ಯಕ್ಷರನ್ನಾಗಿ ಮಾಡಿದ ಸದಸ್ಯರೆಲ್ಲರನ್ನು ಅಭಿನಂದಿಸುತ್ತೇನೆ’ ಎಂದು ತಿಳಿಸಿದರು.

ಉಪಾಧ್ಯಕ್ಷ ಗಂಗಾಂಬಿಕೆ, ಸದಸ್ಯರಾದ ಎಚ್‌.ಜಿ,ಗಂಗರಾಜು, ಯಶೋಧ, ಸಿದ್ದಗಂಗಮ್ಮ, ಚನ್ನವೀರಪ್ಪ, ಎಚ್‌.ಯಶೋಧ, ಕೆ.ಎನ್‌. ಗಂಗರಾಜು, ಮಂಗಳಮ್ಮ, ಗಿರಿಯಪ್ಪ, ಹಾಗೂ ಮುಖಂಡರಾದ ಸಾತನೂರು ದೇವರಾಜು, ಕೆಂಪಸಾಗರ ಮಂಜುನಾಥ್‌, ದೋಣಕುಪ್ಪೆ ರವಿ, ಸತೀಶ್‌, ಚಂದ್ರಶೇಖರ್‌, ರೇವಣ್ಣ, ಸ್ವಾಮಿ, ಶಿವಲಿಂಗಯ್ಯ ಮೂಡ್ಲಯ್ಯ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಪಟಾಕಿ ಸಿಡಿಸಿ, ಸಿಹಿ ವಿತರಿಸಲಾಯಿತು. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT