ರಾಮನಗರ: ‘ಮೂರು ಸಲ ಶಾಸಕನಾಗಿ ಮತ್ತು ಒಮ್ಮೆ ವಿಧಾನ ಪರಿಷತ್ ಸದಸ್ಯನಾಗಿ ನಾನು ಮಾಡಿದ್ದು ನನ್ನ ಕರ್ತವ್ಯವನ್ನೇ ಹೊರತು ಸೇವೆಯನ್ನಲ್ಲ. ಜನ ಅದನ್ನು ದೊಡ್ಡ ಸೇವೆ ಮತ್ತು ಕೊಡುಗೆ ಎಂದು ಪರಿಗಣಿಸಿರುವುದು ಅವರ ದೊಡ್ಡತನ...’ – ಹಿರಿಯ ರಾಜಕಾರಣಿ ಸಿ.ಎಂ. ಲಿಂಗಪ್ಪ ಅವರ ವಿನಮ್ರ ಮಾತುಗಳಿವು.

ರಾಮನಗರ ನಗರಸಭೆಯು ಸೋಮವಾರ ಹಮ್ಮಿಕೊಂಡಿರುವ ‘ರೇಷ್ಮೆನಾಡ ಕನ್ನಡ ಹಬ್ಬ’ದಲ್ಲಿ ‘ಪೌರ ಸನ್ಮಾನ’ಕ್ಕೆ ಪಾತ್ರವಾಗಿರುವ 84 ವರ್ಷದ ಅವರು, ತಮ್ಮ ಆರು ದಶಕಗಳ ಸಾರ್ವಜನಿಕ ಜೀವನದ ಹಿನ್ನೋಟ ಹಾಗೂ ಕಾರ್ಯವೈಖರಿಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ನಿಜವಾಗಿಯೂ ಹೇಳಬೇಕೆಂದರೆ, ನನ್ನ ಕರ್ತವ್ಯ ಎಂದು ಭಾವಿಸಿ ನಾನು ಮಾಡಿದ ಕೆಲಸಗಳಿಗೆ ಸನ್ಮಾನ ಮತ್ತು ಗೌರವ ಸ್ವೀಕರಿಸುವುದು ನನಗೆ ಇಷ್ಟವಿಲ್ಲ. ಆದರೆ, ಕೆ. ಶೇಷಾದ್ರಿ ಶಶಿ ಅವರ ಅಧ್ಯಕ್ಷತೆಯಲ್ಲಿ ರಾಮನಗರ ನಗರಸಭೆ ಮಾಡುತ್ತಿರುವ ಪೌರ ಸನ್ಮಾನಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿದ್ದೇನೆ. ನನ್ನ ಮೇಲೆ ಅವರಿಟ್ಟಿರುವ ಪ್ರೀತಿ ಮತ್ತು ಗೌರವಕ್ಕೆ ನಾನು ಬಾಗಲೇಬೇಕಾಯಿತು’ ಎಂದರು.

ತಂದೆಯೇ ಪ್ರೇರಣೆ: ‘ನಾಗಪುರದಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಾನು, ಆನಂತರ ಕೃಷಿ ಅಧ್ಯಯನಕ್ಕಾಗಿ ಜಪಾನ್ಗೆ ಹೋಗಿ ಬಂದೆ. ಅದೇ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ನನಗೊಂದು ಉದ್ಯೋಗಾವಕಾಶ ಬಂದಿತ್ತು’ ಎಂದು ಹೇಳಿದರು.

‘ಆಗ ಬಗ್ಗೆ ತಂದೆ ಚೋಳೂರಪ್ಪ ಅವರ ಬಳಿ ಹೇಳಿಕೊಂಡೆ. ಅದಕ್ಕವರು, ಊರಲ್ಲೇ ಜಮೀನಿದೆ. ಅದರಲ್ಲೇ ಕೃಷಿ ಮಾಡಿ ಕೈಲಾದ ಜನಸೇವೆ ಮಾಡು ಎಂದರು. ಸಾರ್ವಜನಿಕ ಸೇವೆಗೆ ನಾನು ಧುಮುಕಲು ಅವರ ಮಾತುಗಳೇ ಪ್ರೇರಣೆಯಾದವು’ ಎಂದು ಲಿಂಗಪ್ಪ ನೆನೆದರು.

ನನ್ನದೇ ಫಾಲೋಅಪ್: ‘ಶಾಸಕನಾದಾಗ ಆಶ್ರಯ ಯೋಜನೆಯಡಿ ಮನೆಗಳನ್ನು ಬಡವರಿಗೆ ಹುಡುಕಿ ಕೊಡುತ್ತಿದ್ದೆ. ಫಲಾನುಭವಿಗಳು ಮನೆ ಕಟ್ಟುವವರೆಗೆ ಬಿಡದೆ ಫಾಲೋಅಪ್ ಮಾಡುತ್ತಿದ್ದೆ. ಹಾಗಾಗಿ, ನನ್ನ ಕಾಲದಲ್ಲಿ ಹೆಚ್ಚು ಆಶ್ರಯ ಮನೆಗಳು ನಿರ್ಮಾಣವಾದವು’ ಎಂದು ನೆನಪು ಮಾಡಿಕೊಂಡರು.

‘ನಿವೇಶನ ರಹಿತರನ್ನು ಗುರುತಿಸುವಾಗಲೂ ಲೋಪವಾಗದಂತೆ ನೋಡಿಕೊಂಡೆ. ಆಗ ಹಂಚಿದ ನಿವೇಶನಗಳಲ್ಲಿ ಈಗ ಬಡಾವಣೆಗಳು ತಲೆ ಎತ್ತಿವೆ. ವಾರಕ್ಕೆರಡು ಸಲ ತಾಲ್ಲೂಕು ಕಚೇರಿಯಲ್ಲಿದ್ದು ಜನರ ಸಮಸ್ಯೆ ಆಲಿಸುತ್ತಿದ್ದೆ. ಅಧಿಕಾರಿಗಳನ್ನು ಕರೆದು ಪರಿಹರಿಸುತ್ತಿದ್ದೆ. ಇದರಿಂದಾಗಿ ಜನರ ನೇರ ಒಡನಾಟ ಹೆಚ್ಚಿತು’ ಎಂದರು.

‘ಸೈದಾಂತಿಕ ಬದ್ಧತೆಯ ರಾಜಕಾರಣ ನನ್ನದು. ಆ ವಿಷಯದದಲ್ಲಿ ರಾಜಿ ಮಾಡಿಕೊಂಡವನಲ್ಲ. ಜೀವನದುದ್ದಕ್ಕೂ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ನಾ ಎಲ್ಲೇ ಹೋದರೂ ಜನ ನನ್ನ ಕೆಲಸಗಳನ್ನು ನೆನೆದು ಕೃತಜ್ಞತೆಯ ಮಾತುಗಳನ್ನಾಡಿದಾಗ ನಿಜಕ್ಕೂ ಬದುಕು ಸಾರ್ಥಕವಾಯಿತು ಎನಿಸುತ್ತದೆ’ ಎಂದು ಸಂತಸ ಹಂಚಿಕೊಂಡರು.

ಬಡವರಿಗೆ ಸೌಲಭ್ಯಗಳನ್ನು ತಲುಪಿಸುವ ವಿಷಯದಲ್ಲಿ ನಾನೆದಿಗೂ ಜಾತಿ ಮತ್ತು ಪಕ್ಷ ನೋಡಿದವನಲ್ಲ. ಬಡತನವೇ ನನಗೆ ಮಾನದಂಡ. ಈ ಕಾರಣಕ್ಕೆ ನಮ್ಮ ಪಕ್ಷದವರೇ ನನ್ನ ಬಳಿ ಹಲವು ಸಲ ಬೇಸರ ತೋಡಿಕೊಂಡಿದ್ದರು
– ಸಿ.ಎಂ. ಲಿಂಗಪ್ಪ ಮಾಜಿ ಶಾಸಕ

ಬೆನ್ನು ತಟ್ಟಿ ಕೀಪ್ ಇಟ್ ಅಪ್ ಎಂದಿದ್ದರು!

‘ಎರಡನೇ ಸಲ ಶಾಸಕನಾಗಿದ್ದ ಆರಂಭದಲ್ಲಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರ ಭೇಟಿಗೆ ಹೋಗಿದ್ದೆ. ಅವರ ಕೊಠಡಿಗೆ ಹೋದಾಗ ಸಚಿವ ಸ್ಥಾನ ಕೇಳಲು ಬಂದಿದ್ದೇನೆಯೇ ಎಂಬ ದೃಷ್ಟಿಯನ್ನು ನನ್ನತ್ತ ಬೀರಿದರು. ನಾನಾಗ ‘ಸರ್ ನಾನು ಸಚಿವ ಸ್ಥಾನ ಕೇಳಲು ಬಂದಿಲ್ಲ. ನಿಮ್ಮ ನಾಯಕತ್ವದಲ್ಲಿ ಶಾಸಕನಾಗಿ ಉತ್ತಮ ಕೆಲಸ ಮಾಡಬೇಕು ಎಂಬುದಷ್ಟೇ ನನ್ನಾಸೆ’ ಎಂದೆ. ಅದಕ್ಕವರು ಆಶ್ಚರ್ಯಗೊಂಡರು. ಬೆನ್ನು ತಟ್ಟುತ್ತಾ ‘ಇದುವರೆಗೆ 120 ಮಂದಿ ನನ್ನನ್ನು ಭೇಟಿ ಮಾಡಿ ಸಚಿವನನ್ನಾಗಿ ಮಾಡಿ ಎಂದರು. ನೀವೊಬ್ಬರೆ ಕಣ್ರಿ. ಸಚಿವ ಸ್ಥಾನ ಬೇಡ ಎಂದಿದ್ದು. ವೆರಿಗುಡ್ ಕೀಪ್ ಇಟ್ ಅಪ್. ಮುಂದೆಲ್ಲಾ ಒಳ್ಳೆಯದಾಗುತ್ತೆ’ ಎಂದರು’ ಎಂದು ಲಿಂಗಪ್ಪ ಅವರು ವೀರೇಂದ್ರ ಪಾಟೀಲ ಅವರೊಂದಿಗಿನ ಸಂಭಾಷಣೆಯನ್ನು ನೆನಪಿಸಿಕೊಂಡರು. 3 ಸಾವಿರ ಎಕರೆ ಭೂಮಿ ಹಂಚಿಕೆ ‘ದೇವರಾಜ ಅರಸು ಅವರ ಕಾಲದಲ್ಲಿ ನಾನು ಭೂ ನ್ಯಾಯಮಂಡಳಿ ಸದಸ್ಯನಾಗಿದ್ದಾಗ ನನ್ನ ಕ್ಷೇತ್ರದಲ್ಲಿ 2 ಸಾವಿರ ಭೂ ರಹಿತ ಬಡವರಿಗೆ 3 ಸಾವಿರ ಎಕರೆ ಭೂಮಿ ಹಂಚಿದೆ. ಫಲಾನುಭವಿಗಳಿಂದ ಒಂದು ಲೋಟ ಕಾಫಿ ಸಹ ಮುಟ್ಟದೆ ಇಡೀ ಪ್ರಕ್ರಿಯೆಯಲ್ಲಿ ಎಳ್ಳಷ್ಟು ಭ್ರಷ್ಟಾಚಾರ ನಡೆಯದಂತೆ ನೋಡಿಕೊಂಡೆ. ಈಗ ಆ ಭೂಮಿಗೆ ಕೋಟಿಗಟ್ಟಲೆ ಬೆಲೆ ಇದೆ. ಆ ಕೆಲಸವು ನನ್ನ ರಾಜಕೀಯ ಏಳಿಗೆಗೆ ಹೆಚ್ಚು ಬಲ ನೀಡಿತು’ ಎಂದು ಲಿಂಗಪ್ಪ ಮೆಲುಕು ಹಾಕಿದರು.

ಲಿಂಗಪ್ಪ ರಾಜಕೀಯ ಹಾದಿ

1968ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಗೆಲುವಿನೊಂದಿಗೆ ಲಿಂಗಪ್ಪ ಅವರ ರಾಜಕೀಯ ಜೀವನ ಶುರುವಾಯಿತು. 1985ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ಎದುರು ಸೋತ ಅವರು 1989ರಲ್ಲಿ ಗೆಲುವು ಸಾಧಿಸಿದರು. 1994ರಲ್ಲಿ ಎಚ್.ಡಿ. ದೇವೇಗೌಡ ವಿರುದ್ಧ ಸೋತ ಅವರು ನಂತರ 1997ರ ಚುನಾವಣೆಯಲ್ಲಿ ಚಿತ್ರನಟ ಅಂಬರೀಷ್ ವಿರುದ್ದ ಗೆದ್ದರು. 1999ರಲ್ಲಿ ಮತ್ತೆ ಶಾಸಕರಾದ ಅವರು 2004ರಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪರಾಭವಗೊಂಡರು. 2017ರಿಂದ 2023ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಎರಡು ಸಲ ನಗರ ನೀರು ಪೂರೈಕೆ ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು ವಿವಿಧ ಹುದ್ದೆಗಳನ್ನು ಅಲಂಕರಿಸಿ ಕಾಂಗ್ರೆಸ್ ಕಟ್ಟಲು ಶ್ರಮಿಸಿದ್ದಾರೆ. ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ನಡೆದ ಕಾವೇರಿ ಪಾದಯಾತ್ರೆಯಲ್ಲಿ ಪಾಂಚಜನ್ಯ ಮೊಳಗಿಸಿದ್ದು ಸಿ.ಎಂ. ಲಿಂಗಪ್ಪ ಅವರು ಎಂಬುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.