ರಾಮನಗರ: ಹೆಚ್ಚು ಯುವಜನರನ್ನು ಹೊಂದಿರುವ ಭಾರತದಲ್ಲಿ ನವ ಭಾರತ ನಿರ್ಮಾಣದ ನಿರೀಕ್ಷೆಗೆ ತಕ್ಕಂತೆ ಅಗತ್ಯ ಕೌಶಲ ಅಭಿವೃದ್ಧಿ ಆಗಬೇಕಿದೆ ಎಂದು ಭಾರತೀಯ ಬಾಹ್ಯಕಾಶ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ (ಟಿಟಿಟಿಐ) ಬುಧವಾರ ನಡೆದ ಸಂಸ್ಥೆಯ 16ನೇ ಬ್ಯಾಚ್ ವಿದ್ಯಾರ್ಥಿಗಳ ಘಟಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಕೌಶಲ ಅಭಿವೃದ್ಧಿಯ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಟೊಯೊಟಾದ ನಿರಂತರ ಬದ್ಧತೆ ಶ್ಲಾಘನೀಯ ಎಂದು ಹೇಳಿದರು.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ. ಶಂಕರ ಮಾತನಾಡಿ, ಕೌಶಲಾಭಿವೃದ್ಧಿ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಟಿಟಿಟಿಐ ನಿರಂತರವಾಗಿ ಗ್ರಾಮೀಣ ಯುವಜನರನ್ನು ವಿಶ್ವ ದರ್ಜೆಯ ಸ್ಪರ್ಧಾತ್ಮಕ ತಂತ್ರಜ್ಞರನ್ನಾಗಿ ಪರಿವರ್ತಿಸುತ್ತಿದೆ ಎಂದು ತಿಳಿಸಿದರು.

200 ಮಂದಿಗೆ ಪದವಿ: ಘಟಿಕೋತ್ಸವದಲ್ಲಿ 200 ಮಂದಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು. ಈ ಪೈಕಿ ಕೆಲವರು ವಿಶ್ವ ಕೌಶಲ ಸ್ಪರ್ಧೆಗಳಲ್ಲಿ ಪದಕಗಳನ್ನು ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಇದುವರೆಗೆ ತರಬೇತಿ ಪಡೆದ 1,417 ವಿದ್ಯಾರ್ಥಿಗಳ ಪೈಕಿ 481 ಮಂದಿ ಟಿಕೆಎಂ ಸೇರಿದ್ದಾರೆ. ಇತರರು ಗ್ರೂಪ್ ಕಂಪನಿಗಳು, ಪೂರೈಕೆದಾರ ಸಂಸ್ಥೆಗಳು ಮತ್ತು ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಯುವಜನ ಕೇಂದ್ರಿತ ಕೌಶಲಾಭಿವೃದ್ಧಿಯು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಟಿಟಿಟಿಐನಲ್ಲಿ ತರಬೇತಿ ಪಡೆದು ಪದವೀಧರರಾದವರಿಗೆ ಅವಕಾಶದ ಬಾಗಿಲುಗಳು ಎಲ್ಲೆಡೆ ತೆರೆದಿರುತ್ತವೆ
ಯೊಶಿಹಿರೊ ತೊಹಯಾಮ ಅಧ್ಯಕ್ಷ ಟೊಯೊಟಾ ತಾಂತ್ರಿಕ ಕೌಶಲ ಅಕಾಡೆಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.