ರಾಮನಗರ: ನಗರದ ಬಲಮುರಿ ಗಣೇಶ ದೇವಾಲಯದ ಬಳಿ ಅಳವಡಿಸಿರುವ ನೀರಿನ ನಲ್ಲಿಯಲ್ಲಿ ಭಾನುವಾರ ಸಂಜೆ ನೀರಿನ ಬದಲು ಹೊಗೆ ಬಂದಿದ್ದು, ಜನರನ್ನು ಆತಂಕಗೊಳಿಸಿದೆ. ಕೂಡಲೇ ಸ್ಥಳೀಯರು ಬೆಸ್ಕಾಂ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ನಲ್ಲಿ ಇದ್ದ ಭಾಗದ ವಿದ್ಯುತ್ ಕಡಿತಗೊಳಿಸಿ ಪರಿಶೀಲಿಸಿದರು.

ಬೆಸ್ಕಾಂ ಎಇ ಪ್ರಭಾಕರ್ , ಜಲಮಂಡಳಿ ಅಧಿಕಾರಿ ಶಿವಕುಮಾರ್ ನಗರಸಭೆ ಸದ್ಸಯರಾದ ಮಂಜುಳಾ, ಮಹಾಲಕ್ಷ್ಮಿ ಹಾಗೂ ಸೋಮಶೇಖರ್ ಸಹ ಸ್ಥಳಕ್ಕೆ ಭೇಟಿ ನೀಡಿದರು. ನಗರದ ಮುಖ್ಯರಸ್ತೆಯಲ್ಲಿ ನೀರಿನ ಪೈಪ್ಲೈನ್ ಜೊತೆಗೆ ವಿದ್ಯುತ್ ಮಾರ್ಗ ಸಹ ಹಾದು ಹೋಗಿದೆ. ಎರಡೂ ಸಂಪರ್ಕಗಳಲ್ಲಿ ಏನಾದರೂ ವ್ಯತ್ಯಾಸವಾಗಿ ಹೊಗೆ ಬಂದಿರುವ ಸಾಧ್ಯತೆ ಇದೆ. ಈ ಕುರಿತು ಪರಿಶೀಲನೆ ನಡೆಸಿ ಮತ್ತೆ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು
ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.