ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜದ ನೆರವಿಗೆ ನಿಂತ ಸೇವಾದಳ’

ಡಾ ನಾ.ಸು. ಹರ್ಡಿಕರ್ ಸಮಾಜ ಸೇವೆ ಸ್ಮರಿಸಿದ ಗಣ್ಯರು
Last Updated 8 ಮೇ 2022, 4:11 IST
ಅಕ್ಷರ ಗಾತ್ರ

ರಾಮನಗರ: ನಾ.ಸು. ಹರ್ಡಿಕರ್ ಭಾರತ ಸೇವಾದಳದ ಮೂಲಕ ಸ್ವಾತಂತ್ರ್ಯ ಚಳವಳಿಗೆ ಯುವ ಸಮುದಾಯವನ್ನು ಪ್ರೇರೇಪಿಸಿದ ಸ್ವಾತಂತ್ರ್ಯ ಹೋರಾಟಗಾರ ಎಂದು ಭಾರತ ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರಸ್ವಾಮಿ ಹೇಳಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಶನಿವಾರ ಡಾ ನಾ.ಸು. ಹರ್ಡಿಕರ್ ಅವರ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಬ್ರಿಟಿಷ್‌ ಸರ್ಕಾರದ ವಿರುದ್ಧ ಹಮ್ಮಿ ಕೊಂಡಿದ್ದ ನಾಗರಿಕ ಅವಿಧೇಯ ಚಳವಳಿಯಲ್ಲಿ ಸೇವಾದಳದ ಕಾರ್ಯ ಕರ್ತರು ಮಹತ್ತರ ಪಾತ್ರ ವಹಿಸಿದ್ದರು. ಯುವ ಸಮುದಾಯವನ್ನು ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿದ ಕೀರ್ತಿ ಭಾರತ ಸೇವಾದಳಕ್ಕಿದೆ ಎಂದರು.

ಸ್ವಾತಂತ್ರ್ಯಾ ನಂತರವು ಭಾರತ ಸೇವಾದಳ ನಾಗರಿಕರಿಗೆ ಸಹಕಾರ ನೀಡುತ್ತಿದೆ. ಪ್ರಕೃತಿ ವಿಕೋಪದ ವೇಳೆ ನಾಗರಿಕರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಿದೆ ಎಂದು
ತಿಳಿಸಿದರು.

ಸೇವಾದಳದ ರಾಜ್ಯ ಘಟಕದ ಪ್ರತಿನಿಧಿ ಕಲ್ಪನಾ ಶಿವಣ್ಣ ಮಾತನಾಡಿ, ಭಾರತ ಸೇವಾದಳ ಒಂದು ಸ್ವಯಂಸೇವಾ ಸಂಸ್ಥೆ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಡಾ.ನಾ.ಸು. ಹರ್ಡಿಕರ್ ಅವರ ಉದ್ದೇಶಗಳನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ಪೌರ ಕಾರ್ಮಿಕರು ನಗರದ ನಾಗರಿಕರ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಇಂದು ರಾಮನಗರ ಜಿಲ್ಲಾ ಘಟಕದಿಂದ ಹರ್ಡಿಕರ್ ಅವರ ಸ್ಮರಣಾರ್ಥ ಪೌರ ಕಾರ್ಮಿಕರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಸಹ ವಿತರಿಸಲಾಗುತ್ತಿದೆ ಎಂದರು.

ನಗರಸಭೆ ಅಧ್ಯಕ್ಷೆ ಬಿ.ಸಿ. ಪಾರ್ವತಮ್ಮ, ಭಾರತ ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್ ಮಾತನಾಡಿದರು. ಜಿಲ್ಲಾ ಘಟಕದ ಸಂಘಟಕರಾದ ಶಿವಕುಮಾರ್ ಮತ್ತು ರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT