ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಸವಕಳಿ ತಪ್ಪಿಸುವ ‘ಗೇಬಿಯನ್‌’

ಚೆಕ್‌ಡ್ಯಾಂ ಕಾಮಗಾರಿಯಲ್ಲಿ ಈ ತಂತ್ರಜ್ಞಾನ ಪ್ರಯೋಗ
Last Updated 18 ಜುಲೈ 2021, 5:33 IST
ಅಕ್ಷರ ಗಾತ್ರ

ರಾಮನಗರ: ನರೇಗಾ ಯೋಜನೆಯ ಅಡಿ ಚೆಕ್‌ ಡ್ಯಾಂ ಹಾಗೂ ನಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಸಂದರ್ಭ ಜಿ.ಪಂ. ‘ಗೇಬಿಯನ್‌’ ವಿನ್ಯಾಸ ಬಳಕೆಯ ಮೊರೆ ಹೋಗಿದೆ.

ಕನಕಪುರ ತಾಲ್ಲೂಕಿನ ದೊಡ್ಡಮರಳವಾಡಿ ಗ್ರಾಮ ಪಂಚಾಯಿತಿಯ ಆನೆಹೊಸಹಳ್ಳಿ ಗ್ರಾಮದ ನಾಲಾಭಿವೃದ್ಧಿ ಹಾಗೂ ಚೆಕ್‌ಡ್ಯಾಂ ಕಾಮಗಾರಿಯಲ್ಲಿ ಮೊದಲ ಬಾರಿಗೆ ಗೇಬಿಯನ್ ರಚನೆಯನ್ನು ಅಳವಡಿಸಿಕೊಳ್ಳಲಾಗಿದೆ. ಕಲ್ಲು ರಚನೆಯ ಗೋಡೆಗೆ ತಂತಿಯೊಂದಿಗೆ ಕಟ್ಟಲ್ಪಟ್ಟು, ಇಳಿಜಾರಿನಲ್ಲಿ ಕಲ್ಲುಗೋಡೆಯನ್ನು ಹೆಚ್ಚು ಬಲಪಡಿಸಲು ಬಳಸುವ ರಚನೆ ಇದಾಗಿದೆ.

ಗೇಬಿಯನ್‌ಗಳು ತಂತಿ ಜಾಲರಿ ಬಳಸಿ ನಿರ್ಮಾಣ ಆಗಲಿದ್ದು, ಮಣ್ಣಿನ ಸವೆತ ನಿಯಂತ್ರಣ ಮತ್ತು ಕಡಿದಾದ ಇಳಿಜಾರುಗಳನ್ನು ಸ್ಥಿರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ರೀತಿಯ ಗೇಬಿಯನ್ ಹೆಚ್ಚಾಗಿ ತೋಟಗಾರಿಕೆಯಲ್ಲಿ ಅಥವಾ ಇಳಿಜಾರು ಪ್ರದೇಶದಲ್ಲಿ ಹಾಗೂ ಮಳೆಯಾಗುವ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಮಳೆ ನೀರು ಹರಿಯುವ ಮಾರ್ಗದಲ್ಲಿ ಇವುಗಳನ್ನು ಕಟ್ಟಲಾಗುತ್ತಿದೆ. ಇದರಿಂದಾಗಿ ನೀರನ್ನು ಸಂಗ್ರಹಿಸಿ, ಭೂಮಿಗೆ ಇಂಗಿಸಲಾಗುತ್ತದೆ. ಜತೆಗೆ, ಇಲ್ಲಿಂದ ನೀರು ಹರಿಯುವಾಗ ತಂತಿ ಬೇಲಿಯಿಂದಾಗಿ ಕೇವಲ ನೀರಷ್ಟೇ ಮುಂದಕ್ಕೆ ಹೋಗುತ್ತದೆ. ಈ ಮೂಲಕ ನೀರಿನ ಶುದ್ಧೀಕರಣವು ಆಗಲಿದೆ. ಮಣ್ಣು ಸಹ ಗುಂಡಿಗಳಿಗೆ ಸೇರುವುದಿಲ್ಲ.

ನಿರ್ಮಾಣ ಹೇಗೆ?: ನಾಲಾಗಳಲ್ಲಿ ಸಣ್ಣದಾಗಿ ಗುಂಡಿ ತೆಗೆದು, ಸ್ಥಳೀಯವಾಗಿ ಸಿಗುವ ಕಾಡುಗಲ್ಲುಗಳನ್ನು ತುಂಬಿ ಅದಕ್ಕೆ ಮೆಸ್ ಮಾದರಿಯ ಪದರ ಅಳವಡಿಸಲಾಗುತ್ತದೆ. ಸುತ್ತಲೂ ಎರಡು ಕಡೆ ಪಿಲ್ಲರ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇಳಿಜಾರಿನಲ್ಲಿ ಹರಿಯುವ ನೀರಿನ ವೇಗ ಕಡಿಮೆ ಮಾಡುವುದರಿಂದ ಮಣ್ಣಿನ ಸವಕಳಿ ತಪ್ಪಿಸಬಹುದಾಗಿದೆ.

‘ಒಂದು ಗೇಬಿಯನ್ ನಿರ್ಮಿಸಲು ₹ 2.5 ಲಕ್ಷದಿಂದ ₹ 3 ಲಕ್ಷ ಖರ್ಚಾಗುತ್ತದೆ. ಕಲ್ಲುಗಳನ್ನು ಸ್ಥಳೀಯವಾಗಿ ಶೇಖರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ಒಂದು ಕಡೆ ಮಾತ್ರವೇ ಇದನ್ನು ನಿರ್ಮಿಸಲಾಗಿದ್ದು, ಇದೇ ಮಾದರಿಯಲ್ಲಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ 5 ಕಿ.ಮೀ.ಗೊಂದು ನಾಲಾ ನಿರ್ಮಿಸಲಾಗುವುದು’ ಎನ್ನುತ್ತಾರೆ ಜಿ.ಪಂ. ಸಿಇಒ ಇಕ್ರಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT