ಮುತ್ತಪ್ಪ ರೈ ಹೆಸರಿನಲ್ಲಿ ವಿಶೇಷ ಪೂಜೆ

ಸೋಮವಾರ, ಮೇ 27, 2019
24 °C

ಮುತ್ತಪ್ಪ ರೈ ಹೆಸರಿನಲ್ಲಿ ವಿಶೇಷ ಪೂಜೆ

Published:
Updated:
Prajavani

ಕನಕಪುರ: ನಗರದ ಎಂ.ಜಿ.ರಸ್ತೆಯಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಜಯಕರ್ನಾಟಕ ತಾಲ್ಲೂಕು ಘಟಕದ ವತಿಯಿಂದ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಎನ್‌.ಮುತ್ತಪ್ಪ ರೈ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಕಾಯಾಧ್ಯಕ್ಷ ವೀರೇಶ್‌ ಜಿ.ಪಿ.ಮಾತನಾಡಿ, ಮುತ್ತಪ್ಪ ರೈ ಅವರ ಜನ್ಮ ದಿನವನ್ನು ಯಾವುದೇ ದುಂದು ವೆಚ್ಚವಿಲ್ಲದೆ ಸರಳವಾಗಿ ದೇವಾಲಯದಲ್ಲಿ ಪೂಜೆ ನೆರವೇರಿಸುವ ಮೂಲಕ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸಂಚಾಲಕ ಎ.ಪಿ.ಕೃಷ್ಣಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ರಾಜು, ಪದಾಧಿಕಾರಿಗಳಾದ ಕಾಳಪ್ಪ, ನಾರಾಯಣಸ್ವಾಮಿ, ಶಂಕರ, ವಿನಯ್‌, ಪ್ರಕಾಶ್‌, ನಿಂಗಪ್ಪ, ಸಂತೋಷ, ಕೆ.ಆರ್‌.ಚಂದ್ರು, ಶೇಖರಯ್ಯ, ಮಿಲ್ಟ್ರಿ ರಾಮಣ್ಣ, ಸ್ಟುಡಿಯೊ ಚಂದ್ರು, ಕೆ.ಎಸ್.ಭಾಸ್ಕರ್‌, ಬಂಡಿ ನಾಗರಾಜು, ಮಾದೇವ, ಸತೀಶ, ಮಹೇಶ, ಜಗದೀಶ, ಚಂದನ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !