ಮಂಗಳವಾರ, ಆಗಸ್ಟ್ 16, 2022
27 °C

ಎಸ್ಸೆಸ್ಸೆಲ್ಸಿ ಪರೀಕ್ಷೆ ಮರು ಮೌಲ್ಯಮಾಪನ: ಜಿಲ್ಲೆಗೆ ಸಾತ್ವಿಕ್‌ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಇಲ್ಲಿನ ಜೈನ್‌ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ಸಿ. ಸಾತ್ವಿಕ್‌ ಎಸ್ಸೆಸ್ಸೆಲ್ಸಿ ಪರೀಕ್ಷೆ ಮರು ಮೌಲ್ಯಮಾಪನದಲ್ಲಿ 625 ಕ್ಕೆ 622 ಅಂಕಗಳಿಸಿದ್ದು, ಜಿಲ್ಲೆಗೆ ಅತಿಹೆಚ್ಚು ಅಂಕ ಪಡೆದವರಲ್ಲಿ ಮೊದಲಿಗನಾಗಿದ್ದಾನೆ. 

ತಾಲ್ಲೂಕಿನ ಹೂಕುಂದ ಗ್ರಾಮದ ಚಿಣ್ಣಪ್ಪ ಅವರ ಪುತ್ರ ಸಿ. ಸಾತ್ವಿಕ್‌  ಈ ಮೊದಲು ಪರೀಕ್ಷೆಯಲ್ಲಿ 619 ಅಂಕಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದ. ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದು ಇನ್ನು ಹೆಚ್ಚಿನ ಅಂಕ ಬರಬೇಕಿತ್ತು ಎಂದು ಶಾಲೆಯ ಶಿಕ್ಷಕರಲ್ಲಿ ವಿನಂತಿ ಮಾಡಿದ್ದ. ಶಿಕ್ಷಕರೇ ಸ್ವತಃ ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನು ಹಾಕಿದ್ದು 3 ಅಂಕಗಳು ಹೆಚ್ಚಿಗೆ ಬಂದಿವೆ. 

ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಓದಿದ ಶಾಲೆ, ತಾಲ್ಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಉತ್ತಮ ಫಲಿತಾಂಶ ಪಡೆದಿರುವ ಅವನನ್ನು ಜೈನ್‌ ವಿದ್ಯಾಸಂಸ್ಥೆ ಅಭಿನಂದಿಸುತ್ತದೆ ಎಂದು ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.