ಮಾಗಡಿ: ಐತಿಹಾಸಿಕ ಪಟ್ಟಣವಾಗಿರುವ ಮಾಗಡಿಯು ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲೂ ಇತ್ತೀಚಿನ ವರ್ಷಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಾ ಬಂದಿದೆ. ತಾಲ್ಲೂಕಿನ ವಿದ್ಯಾರ್ಥಿಗಳು ಸತತ ಎರಡು ಸಲ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಕೀರ್ತಿ ತಂದಿದ್ದಾರೆ. ಐತಿಹಾಸಿಕ ಸ್ಥಳಗಳು, ಕೃಷಿ, ಬೃಹತ್ ಬಂಡೆಗಳ ಪ್ರವಾಸ ಸ್ಥಳಗಳಿಗೆ ಹೆಸರುವಾಸಿಯಾಗಿರುವ ತಾಲ್ಲೂಕು, ಇದೀಗ ಎಸ್ಎಸ್ಎಲ್ಸಿ ಫಲಿತಾಂಶದಲ್ಲೂ ಗಮನ ಸೆಳೆಯುತ್ತಿದೆ.

ಕಳೆದ ವರ್ಷ 2024ನೇ ಸಾಲಿನಲ್ಲಿ ಶೇ 88.36ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಉಳಿಸಿಕೊಂಡಿದ್ದ ತಾಲ್ಲೂಕು, 2025ರಲ್ಲಿ ಶೇ 71.14ರಷ್ಟು ಫಲಿತಾಂಶ ಪಡೆದು ಸತತ ಎರಡನೇ ಸಲ ಪ್ರಥಮ ಸ್ಥಾನ ಉಳಿಸಿಕೊಂಡಿದೆ. ಜಿಲ್ಲೆಗೆ ಅತಿ ಹೆಚ್ಚು 623 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿರುವ ಇಬ್ಬರು ಮತ್ತು ತೃತೀಯ ಸ್ಥಾನ ಪಡೆದಿರುವ ವಿದ್ಯಾರ್ಥಿಗಳು ಮಾಗಡಿ ತಾಲ್ಲೂಕಿನವರು. ಕಳೆದ ಸಲವೂ ತಾಲ್ಲೂಕಿನ ವಿದ್ಯಾರ್ಥಿಗಳೇ ಪ್ರಥಮ ಸ್ಥಾನ ಪಡೆದಿದ್ದರು ಎಂಬುದು ಗಮನಾರ್ಹ.

‘2022ರಲ್ಲಿ ಶೇ 95.73 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದ ತಾಲ್ಲೂಕು, 2023ರಲ್ಲಿ ಶೇ 83.88 ಫಲಿತಾಂಶದೊಂದಿಗೆ ಕಡೆಯ ಸ್ಥಾನಕ್ಕೆ ಕುಸಿದಿತ್ತು. ನಂತರ 2024 ಮತ್ತು 2025ರಲ್ಲಿ ಮತ್ತೆ ಪ್ರಥಮ ಸ್ಥಾನ ಭದ್ರಪಡಿಸಿಕೊಂಡಿದೆ. ತಾಲ್ಲೂಕಿನ ಶಿಕ್ಷಕರ ಶ್ರಮ ಹಾಗೂ ಫಲಿತಾಂಶ ಹೆಚ್ಚಳಕ್ಕೆ ಇಲಾಖೆ ಕೈಗೊಂಡ ಕ್ರಮಗಳ ಸಮರ್ಪಕ ಅನುಷ್ಠಾನ ಇದಕ್ಕೆ ಕಾರಣ’ ಎಂದು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

5 ಶಾಲೆಗೆ ಶೇ 100 ಫಲಿತಾಂಶ: ‘ಈ ವರ್ಷ ತಾಲ್ಲೂಕಿನ 5 ಪ್ರೌಢಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. ಕಸಬಾ ಹೋಬಳಿಯ ವೆಂಕಟ್ ಇಂಟರ್ ನ್ಯಾಷನಲ್ ಶಾಲೆ, ಮಾಡಬಾಳ್ ಹೋಬಳಿಯ ಅನುದಾನ ರಹಿತ ದೋಣಕುಪ್ಪೆ ಸಿಎನ್ಎಸ್ ಶಾಲೆ ಹಾಗೂ ಸೋಲೂರು ಹೋಬಳಿಯ ಬ್ರಿಲಿಯಂಟ್ ವ್ಯಾಲಿ ಶಾಲೆ ಶೇ 100ರಷ್ಟು ಫಲಿತಾಂಶ ದಾಖಲಿಸಿವೆ. ತಾಲ್ಲೂಕಿನಲ್ಲಿ 28 ಸರ್ಕಾರಿ, 25 ಅನುದಾನಿತ ಹಾಗೂ 19 ಅನುದಾನ ರಹಿತ ಶಾಲೆಗಳಿವೆ’ ಎಂದು ಹೇಳಿದರು.

‘ಒಟ್ಟಾರೆ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಶೇ 71, ಅನುದಾನಿತ ಶಾಲೆಗಳು ಶೇ 58.48 ಹಾಗೂ ಅನುದಾನ ರಹಿತ ಶಾಲೆಗಳು ಶೇ 87.62 ಫಲಿತಾಂಶ ಪಡೆದಿದ್ದು, ತಾಲ್ಲೂಕಿನ ಒಟ್ಟು ಫಲಿತಾಂಶ ಶೇ 71.14ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ. ಮಾಗಡಿಯ ವಾಸವಿ ಶಾಲೆ ಟಿ.ಎಚ್. ಯತಿಕಾ 623, (ಶೇ 99.68) ಮತ್ತು ಕುದೂರಿನ ಗುರುಕುಲ ವಿದ್ಯಾಮಂದಿರ ಶಾಲೆಯ ಯುವನಶ್ರೀ 623 (ಶೇ 99.68) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಾಸವಿ ಶಾಲೆಯ ಜಿ.ಎಸ್. ಆದಿತ್ಯ ಶಮಿತ್ 622 (ಶೇ 99.52) ಅಂಕದೊಂದಿಗೆ ಮತ್ತು ಡಿ. ರಚನಾ 621 (ಶೇ 99.36) ಅಂಕಗಳೊಂದಿಗೆ 3ನೇ ಸ್ಥಾನ ಗಳಿಸಿದ್ದಾರೆ’ ಎಂದು ತಿಳಿಸಿದರು.

- ‘ಶಿಕ್ಷಕರು–ಮಕ್ಕಳ ಶ್ರಮ ಕಾರಣ’ ‘

ಮಾಗಡಿ ತಾಲ್ಲೂಕು ಗುಣಮಟ್ಟದ ಶಿಕ್ಷಣದ ಕಾರಣಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಕಾಯ್ದುಕೊಳ್ಳುತ್ತಾ ಬಂದಿದೆ. ಅತ್ಯುತ್ತಮ ಫಲಿತಾಂಶದಕ್ಕಾಗಿ ತಾಲ್ಲೂಕಿನಲ್ಲಿ ಶಿಕ್ಷಕರಿಗೆ ತರಬೇತಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಸಂವಾದ ಕಾರ್ಯಕ್ರಮ ಪುನರ್ಮನನ ತರಗತಿಗಳನ್ನು ಆಯೋಜಿಸಲಾಗುತ್ತದೆ. ಶಿಕ್ಷಕರು ಶ್ರಮದ ಜೊತೆಗೆ ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ತಾಲ್ಲೂಕು ಜಿಲ್ಲೆಯಲ್ಲೆ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಯಿತು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು. ‘ಸರ್ಕಾರಿ ಶಾಲೆಗೆ ಶೇ 72 ಫಲಿತಾಂಶ’ ‘ತಾಲ್ಲೂಕಿನಲ್ಲಿರುವ 21 ಸರ್ಕಾರಿ ಶಾಲೆಗಳಲ್ಲಿ ಶೇ 72ರಷ್ಟು ಫಲಿತಾಂಶ ಬಂದಿದೆ. ಈ ಪೈಕಿ ಶ್ರೀಪತಿಹಳ್ಳಿಯ ಪ್ರೌಢಶಾಲೆ ಶೇ 92.59 ಹಾಗೂ ಗಂಗೋನಹಳ್ಳಿ ಪ್ರೌಢಶಾಲೆ ಅತಿ ಹೆಚ್ಚು ಶೇ 90 ಫಲಿತಾಂಶ ಪಡೆದಿವೆ. ಸಂಕಿಘಟ್ಟ ಶಾಲೆ ಶೇ 50 ಅತಿ ಕಡಿಮೆ ಫಲಿತಾಂಶ ದಾಖಲಿಸಿದೆ. ಬಾಣವಾಡಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಶೇ 97.50 ಹುಲಿಕಟ್ಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 92.86 ಫಲಿತಾಂಶ ಪಡೆದಿವೆ’ ಎಂದು ಬಿಇಒ ಚಂದ್ರಶೇಖರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.