ರಾಮನಗರ: ಬೆಂಗಳೂರಿನ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಸಂಕೀರ್ಣದಲ್ಲಿ ನಡೆದ ರಾಜ್ಯ ಮಟ್ಟದ ಟೇಕ್ವಾಂಡೊ ಸ್ಪರ್ಧೆಯಲ್ಲಿ 8ರಿಂದ 10 ವರ್ಷದೊಳಗಿನ 25 ಕೆ.ಜಿ.ಯಿಂದ 28 ಕೆ.ಜಿ ತೂಕದೊಳಗಿನ ಸ್ಪರ್ಧೆಯಲ್ಲಿ ರಾಮಗನರದ ಶಾನ್ವಿ ಸತೀಶ್ ಸ್ಪಾರಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾಳೆ.

ಜ. 22ರಿಂದ 24ರವರೆಗೆ ನಡೆದ ಸ್ಪರ್ಧೆಯಲ್ಲಿ ನೇಟಸ್ ಶಾಲಾ ತಂಡದಲ್ಲಿ ಶಾನ್ವಿ ಭಾಗವಹಿಸಿದ್ದಳು. ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ಕ್ರಿಡಾಪಟುಗಳು ಭಾಗವಹಿಸಿದ್ದರು. ಇದಕ್ಕೂ ಮುಂಚೆ ಶಾನ್ವಿ ದುಬೈ, ಉಜ್ಬೇಕಿಸ್ತಾನ ಹಾಗೂ ಏಶಿಯನ್ ಚಾಂಪಿಯನ್ಶಿಪ್ನಲ್ಲೂ ಚಿನ್ನ ಮತ್ತು ಬೆಳ್ಳಿ ಪದಕದ ಸಾಧನೆ ಮಾಡಿದ್ದಳು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಪುತ್ರಿಯಾದ ಶಾನ್ವಿಗೆ ಭಾರತ ತಂಡದ ತರಬೇತುದಾರ ಪ್ರದೀಪ್ ಮತ್ತು ಬಾಲರಾಜನ್ ತರಬೇತಿ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.