ಗುರುವಾರ , ಜುಲೈ 29, 2021
27 °C

ಮಾಗಡಿ: ಜನರ ಮನ ಸೆಳೆವ ಹೂವಿನ ವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಪಟ್ಟಣದ ಕೋಟೆಯ ಪೂರ್ವ ಕಂದಕ ಮುಚ್ಚಿರುವ ಸ್ಥಳದಲ್ಲಿ ಬೆಳೆದಿರುವ ಮರಗಳು ಸುಂದರ ಹೂವಿನ ವನದಂತಿದ್ದು, ದಾರಿಹೋಕರ ಮನ ಸೆಳೆಯುತ್ತಿವೆ.

ಐದು ವರ್ಷಗಳ ಹಿಂದೆ ಕಂದಕ ಮುಚ್ಚಿ ಗಿಡ ನೆಡಲಾಯಿತು. ಸಮಾಜ ಸೇವಕ ಕೆ. ಬಾಗೇಗೌಡ  ಅವರ ಸಹಕಾರದಿಂದ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು, ಅರಣ್ಯ ಇಲಾಖೆ ಹಾಗೂ ನ್ಯಾಯಾಲಯದ ಸಿಬ್ಬಂದಿಯ ಪರಿಶ್ರಮದಿಂದ ನೂರಾರು ಮರಗಳು ಬೆಳೆದು ನಿಂತಿವೆ. ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಅವುಗಳ ಸುತ್ತಲೂ ಟ್ರೀಗಾರ್ಡ್‌ ಮಾಡಿಸಿದ್ದರಿಂದ ಬೆಳವಣಿಗೆಗೆ ಸಹಕಾರಿಯಾಯಿತು. 

ಮಾಗಡಿಯಲ್ಲಿ ಮಣ್ಣಿನ ಕೋಟೆ ಕಟ್ಟಿಸಿದ ಗುಡೇಮಾರನಹಳ್ಳಿ ತಳಾರಿ ಗಂಗಪ್ಪ ನಾಯಕ ಕೋಟೆಯ ಪೂರ್ವ ದ್ವಾರದ ಬಳಿ ಕೋಟೆಮಾರಮ್ಮ ದೇವಾಲಯ ನಿರ್ಮಿಸಿದ್ದಾರೆ. ಬಿಜಾಪುರದ ದಂಡನಾಯಕ ರಣದುಲ್ಲಾಖಾನ್ ಬೆಂಗಳೂರಿಗೆ ಮುತ್ತಿಗೆ ಹಾಕಿದಾಗ ಕ್ರಿ.ಶ. 1632ರಲ್ಲಿ ಸುರಕ್ಷತೆ ದೃಷ್ಟಿಯಿಂದ ಇಮ್ಮಡಿ ಕೆಂಪೇಗೌಡ ಪಾಳೇಗಾರ ತಳಾರಿ ಗಂಗಪ್ಪನಾಯಕನನ್ನು ಕೊಂದು ಮಾಗಡಿ ದುರ್ಗವನ್ನು ವಶಪಡಿಸಿಕೊಂಡ.

ಮಣ್ಣಿನ ಕೋಟೆಯ ಹೊರಮೈಗೆ ಕಲ್ಲುಗಳನ್ನು ಕಟ್ಟಿಸಿದರು. ಕೋಟೆ ಮತ್ತು ಕೋಟೆಯ ಸುತ್ತಲಿನ ಕಂದಕ ಒತ್ತುವರಿಯಾಗಿದೆ. ಇತಿಹಾಸ ಪ್ರಜ್ಞೆಯಿಲ್ಲದವರು ಕೋಟೆಯ ನಿವೇಶನ ಕಬಳಿಸಿದ್ದಾರೆ.

‘ಕೋಟೆ ಮಾರಮ್ಮ ದೇವಿ, ಕೋಟೆ ರಾಮೇಶ್ವರ ಸ್ವಾಮಿ, ಕೋಟೆ ಚಾಮುಂಡೇಶ್ವರಿ ದೇವಾಲಯಗಳ ದರ್ಶನ ಮಾಡಿ ಹಸಿರಿನಿಂದ ಆವೃತ್ತವಾಗಿರುವ ಸಸ್ಯರಾಶಿಯತ್ತ ಬಂದರೆ ಭಕ್ತಿಯ ಜೊತೆಗೆ ಉತ್ತಮ ಆಮ್ಲಜನಕವೂ ದೊರೆಯುತ್ತದೆ’ ಎಂದು ವಾಯುವಿಹಾರಿ ಪಿ.ಸಿ.ವಿ. ಸೀತಾರಾಮು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು