ಸೋಮವಾರ, ಆಗಸ್ಟ್ 2, 2021
27 °C
CHANNPATNA

ಸೀಲ್‌ ಇದ್ದ ಪ್ರಯಾಣಿಕರನ್ನು ಕೆಳಗಿಳಿಸುವಂತೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ಸರ್ಕಾರಿ ಬಸ್‌ನಲ್ಲಿ ಕೈಗೆ ಸೀಲು ಹಾಕಿಸಿಕೊಂಡಿದ್ದ ಪ್ರಯಾಣಿಕರನ್ನು ಗಮನಿಸಿ ಅವರನ್ನು ಬಸ್ಸಿನಿಂದ ಕೆಳಗೆ ಇಳಿಸುವಂತೆ ಪ್ರಯಾಣಿಕರು ಒತ್ತಾಯಿಸಿದ ಘಟನೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬುಧವಾರ ನಡೆಯಿತು.‌

ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಸರ್ಕಾರಿ ಬಸ್ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಫಿ –ತಿಂಡಿಗಾಗಿ ನಿಲ್ಲಿಸಿದ್ದ ಸಂದರ್ಭದಲ್ಲಿ ಕೈಗೆ ಸೀಲ್ ಹಾಕಿಸಿಕೊಂಡಿದ್ದ ಉತ್ತರ ಪ್ರದೇಶದ ಮೂಲದವರು ಎನ್ನಲಾದ ಇಬ್ಬರು ಯುವತಿಯರು ನಾಲ್ವರು ಪುರುಷರನ್ನು ಗಮನಿಸಿ ಅವರನ್ನು ಬಸ್ಸಿನಿಂದ ಕೆಳಗೆ ಇಳಿಸುವಂತೆ ಪ್ರಯಾಣಿಕರು ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಒತ್ತಾಯಿಸಿದರು.

ಸೀಲ್ ಹಾಕಿಸಿಕೊಂಡವರು 14 ದಿನ ಕ್ವಾರಂಟೈನ್ ಮುಗಿಸಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮೈಸೂರಿಗೆ ಪ್ರಯಾಣಿಸುತ್ತಿರುವುದಾಗಿ ಪತ್ರ ತೋರಿಸಿದ್ದಾರೆ. ಅವರ ಬಳಿ ಇರುವ ಪತ್ರ ನೋಡಿದರೂ ತೃಪ್ತರಾಗದ ಪ್ರಯಾಣಿಕರು ಮತ್ತೆ ರಂಪಾಟ ನಡೆಸಿದರು ಎಂದು ವ್ಯವಸ್ಥಾಪಕರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.