ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಲ್ ಡಿ ಬ್ಯಾಂಕ್ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ

ಆಯ್ಕೆ
Published 19 ಜುಲೈ 2023, 5:11 IST
Last Updated 19 ಜುಲೈ 2023, 5:11 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಗೆ 14 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು.

ಬ್ಯಾಂಕ್‌ನ 14 ನಿರ್ದೇಶಕರ ಆಯ್ಕೆಗೆ ಜುಲೈ 23ರಂದು ಚುನಾವಣೆ ಘೋಷಣೆಯಾಗಿತ್ತು. ಬಿರುಸಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ನಡೆದಿತ್ತು. ನಾಮಪತ್ರ ವಾಪಸ್ ಪಡೆಯಲು ಕಡೆ ದಿನವಾಗಿದ್ದ ಜು.16ರಂದು 10 ನಿರ್ದೇಶಕರ ಕ್ಷೇತ್ರಗಳಲ್ಲಿ ಒಬ್ಬೊಬ್ಬರು ಉಳಿದು ಉಳಿದವರೆಲ್ಲರೂ ನಾಮಪತ್ರ ವಾಪಸ್ ಪಡೆದಿದ್ದ ಕಾರಣ 10ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅಧಿಕೃತ ಘೋಷಣೆ ಬಾಕಿ ಉಳಿದಿತ್ತು.

ಉಳಿದಂತೆ 4 ಕ್ಷೇತ್ರಗಳಿಗೆ ತಲಾ ಇಬ್ಬರಂತೆ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ 8ಸ್ಪರ್ಧಿಗಳು ಕಣದಲ್ಲಿ ಉಳಿದಿದ್ದ ಕಾರಣ ಚುನಾವಣೆ ನಡೆಯುವುದು ಅನಿವಾರ್ಯವಾಗಿತ್ತು. ಆದರೆ, ಜು.18ರಂದು ಜೆಡಿಎಸ್ ಹಾಗೂ ಬಿಜೆಪಿ ಮುಖಂಡರಲ್ಲಿ ಒಮ್ಮತ ಮೂಡಿ ಕಣದಲ್ಲಿ ಉಳಿದಿದ್ದ 8 ಮಂದಿಯಲ್ಲಿ ಒಂದೊಂದು ಕ್ಷೇತ್ರದಲ್ಲಿ 4ಮಂದಿ ಚುನಾವಣಾ ಕಣದಿಂದ ನಿವೃತ್ತಿ ಘೋಷಣೆ ಮಾಡಿ ಚುನಾವಣಾಧಿಕಾರಿಗೆ ಲಿಖಿತ ಪತ್ರ ನೀಡಿದ ಹಿನ್ನೆಲೆಯಲ್ಲಿ ಎಲ್ಲ 14 ಕ್ಷೇತ್ರಗಳಿಗೂ ಅವಿರೋಧ ಆಯ್ಕೆ ನಡೆಯಿತು.

ಸಾಲಗಾರರ ಕ್ಷೇತ್ರಗಳಾದ ಚಕ್ಕೆರೆ ಕ್ಷೇತ್ರದಿಂದ ಜಿ.ಎಚ್.ನಾಗರಾಜು, ಮುದಗೆರೆ ಕ್ಷೇತ್ರದಿಂದ ರೇವ ಹೆಗ್ಗಡೆ, ಚನ್ನಪಟ್ಟಣ ಕ್ಷೇತ್ರದಿಂದ ಟಿ.ಪಿ.ಹನುಮಂತಯ್ಯ, ಮಳೂರುಪಟ್ಟಣ ಕ್ಷೇತ್ರದಿಂದ ಎಂ.ಬಿ.ಬೈರನರಸಿಂಹಯ್ಯ, ಸುಳ್ಳೇರಿ ಕ್ಷೇತ್ರದಿಂದ ಪ್ರಮೀಳ, ಕೋಡಂಬಹಳ್ಳಿ ಕ್ಷೇತ್ರದಿಂದ ಮದ್ದೂರಯ್ಯ, ಅಕ್ಕೂರು ಕ್ಷೇತ್ರದಿಂದ ಸಿದ್ದರಾಜು, ಎಲೇತೋಟದಹಳ್ಳಿ ಕ್ಷೇತ್ರದಿಂದ ಕುಮಾರ್, ಬಿ.ವಿ.ಹಳ್ಳಿ ಕ್ಷೇತ್ರದಿಂದ ಈಶ್ವರಯ್ಯ, ಬೇವೂರು ಕ್ಷೇತ್ರದಿಂದ ಮಾಗನೂರು ಗಂಗರಾಜು, ಹೊಂಗನೂರು ಕ್ಷೇತ್ರದಿಂದ ಜಯಮ್ಮ, ನಾಗವಾರ ಕ್ಷೇತ್ರದಿಂದ ಅಬ್ಬೂರು ವೆಂಕಟೇಶ್, ಸಿಂಗರಾಜಪುರ ಕ್ಷೇತ್ರದಿಂದ ಗಂಗರಾಜು, ಸಾಲಗಾರರಲ್ಲದ ಕ್ಷೇತ್ರದಿಂದ ಸಿ.ವಿ.ಮೋಹನ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆ ಶಿವಶಂಕರ್ ಕಾರ್ಯನಿರ್ವಹಿಸಿದರು. ಬ್ಯಾಂಕ್ ವ್ಯವಸ್ಥಾಪಕ ರವಿಶಂಕರ್, ಲೆಕ್ಕಾಧಿಕಾರಿ ರಾಮು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT