ಮಾಗಡಿ: ತಾಲ್ಲೂಕಿನ ಸಾವನದುರ್ಗ ಬೆಟ್ಟದ ತಪ್ಪಲಿನಲ್ಲಿ ನೆಲಸಿರುವ ಭದ್ರಕಾಳಮ್ಮ ಸಮೇತ ಸಾವಂದಿ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವೀರಭದ್ರೇಶ್ವರ ಜಯಂತಿ ನಡೆಯಿತು.

ವೀರಭದ್ರಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಸ್ವಾಮಿಗೆ ಗಂಗಾಪೂಜೆ, ಮಹಾಗಣಪತಿ ಪೂಜೆ, ನವಗ್ರಹ ಶಾಂತಿ, ಗಣಹೋಮ, ರುದ್ರ ಹೋಮ, ರುದ್ರಾಭಿಷೇಕ, ಅಷ್ಟೋತ್ತರ, ವಿಶೇಷ ಅಲಂಕಾರ, ಮಹಾ ಮಂಗಳಾರತಿ, ವೀರಗಾಸೆ ಸಮೇತ ಸ್ವಾಮಿಯ ಪ್ರಕಾರೋತ್ಸವ ಸೇವೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು. ದೇವಾಲಯದ ಆವರಣದಲ್ಲಿ ಪುಷ್ಪಾಲಂಕೃತ ಸ್ವಾಮಿಯ ಉತ್ಸವ ವೀರಭದ್ರೇಶ್ವರ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಲಾಯಿತು.

ಜಡೆದೇವರ ಮಠದ ಪೀಠಾಧ್ಯಕ್ಷರಾದ ಇಮ್ಮಡಿ ಬಸವರಾಜ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪ್ರಧಾನ ಅರ್ಚಕರಾದ ಮೃತ್ಯುಂಜಯಾರಾಧ್ಯ, ಅರ್ಚಕರಾದ ನಿರಂಜನಾರಾಧ್ಯ, ಎಲ್.ವಿ.ಟ್ರಾವೆಲ್ ಮಾಲೀಕರಾದ ಪರಮಶಿವಯ್ಯ, ಪಂಚಾಕ್ಷರಿ, ರೇಣುಕಾಪ್ರಸಾದ್, ವಿ.ಜಿ.ದೊಡ್ಡಿ ಲೋಕೇಶ್, ಪೊಲೀಸ್ ಸಚ್ಚಿದಾನಂದ ಮೂರ್ತಿ, ರುದ್ರೇಶ್, ನೀಲಾಂಬಿಕೆ ರುದ್ರಮೂರ್ತಿ, ಅಂಬರೀಶ್, ಸಿದ್ದಲಿಂಗಸ್ವಾಮಿ, ದೇವಸ್ಥಾನದ ಆಡಳಿತ ಮಂಡಳಿಯವರು, ಸಿಬ್ಬಂದಿಗಳು, ಭಕ್ತಾದಿಗಳು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.