ರಾಮನಗರ: ಯಶ್ ಅಭಿನಯದ ‘ಕೆಜಿಎಫ್’ ಚಿತ್ರವು ಇಲ್ಲಿನ ಶಾನ್ ಚಿತ್ರಮಂದಿರದಲ್ಲಿ ಶುಕ್ರವಾರ ತೆರೆ ಕಂಡಿದ್ದು, ಅವರ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಬೆಳಿಗ್ಗೆ 6.45ಕ್ಕೆ ಮೊದಲ ಪ್ರದರ್ಶನ ಆರಂಭಗೊಂಡಿದ್ದು, ನೂರಾರು ಪ್ರೇಕ್ಷಕರು ನೆರೆದಿದ್ದರು. ಮೊದಲ ದಿನ ಒಟ್ಟು ಐದು ಪ್ರದರ್ಶನಗಳು ನಡೆದಿದ್ದು, ಎಲ್ಲವೂ ಹೌಸ್ಫುಲ್ ಆದವು. ಚಿತ್ರಮಂದಿರದ ಮುಂಭಾಗ ನೂರಾರು ಮಂದಿ ನೆರೆದಿದ್ದು, ಯಶ್ರ ಆಳೆತ್ತರದ ಕಟೌಟ್ಗಳನ್ನು ಹಾಕಿ ಶುಭ ಕೋರಿದರು.
ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದ ಸದಸ್ಯರು ಯಶ್ ಭಾವಚಿತ್ರವುಳ್ಳ ಟೀ–ಶರ್ಟ್ ಧರಿಸಿ, ಚಿತ್ರಮಂದಿರದ ಬಳಿ 35 ಕೆ.ಜಿ. ತೂಕದ ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಹಂಚಿದರು. ಟಮಟೆ ಬಡಿದು, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಂಗವಿಕಲರು, ಹಿರಿಯರ ಸಹಿತ ಹತ್ತಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಟಿಕೆಟ್ ಹಂಚಿ ಅಭಿಮಾನ ಮೆರೆದರು.
ಚಂದನ್, ನಾಗಾರ್ಜುನ್, ಆನಂದ್, ರವಿಕಿರಣ್, ಪ್ರವೀಣ್, ದಿನೇಶ್, ಬೆಟ್ಟೇಗೌಡ ಇದ್ದರು.