ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪರ್ಧೆಯಿಂದ ಹಿಂದೆ ಸರಿದು ನೆರವಾದ ಯೋಗೇಶ್ವರ್: ಸಂಸದ ಸುರೇಶ್

Published 15 ಮಾರ್ಚ್ 2024, 14:19 IST
Last Updated 15 ಮಾರ್ಚ್ 2024, 14:19 IST
ಅಕ್ಷರ ಗಾತ್ರ

ರಾಮನಗರ: ‘ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ ಹಿಂದಕ್ಕೆ ಸರಿಯುವುದರ ಮೂಲಕ, ನನಗೆ ಸಹಾಯ ಮಾಡಿದ್ದಾರೆ. ಅವರಷ್ಟೇ ಅಲ್ಲದೆ, ಅವರ ಪಕ್ಷದವರೂ ನೆರವಾಗುತ್ತಾರೆ’ ಎಂದು ಸಂಸದ ಡಿ.ಕೆ. ಸುರೇಶ್ ವ್ಯಂಗ್ಯವಾಡಿದರು. ಅವರ ಮಾತಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ದನಿಗೂಡಿಸಿದರು.

‘ಸುರೇಶ್ ಅವರು ಸಂಸದರಾಗಲು ನಾನು ನೆರವಾಗಿದ್ದೆ’ ಎಂಬ ಯೋಗೇಶ್ವರ್ ಅವರ ಹೇಳಿಕೆಗೆ, ನಗರದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಯೋಗೇಶ್ವರ್ ಹಿಂದಿನ ಚುನಾವಣೆಗಳಲ್ಲಷ್ಟೇ ಅಲ್ಲದೆ, ಈಗಲೂ ನನಗೆ ಸಹಾಯ ಮಾಡಿದ್ದಾರೆ. ನಿಜವಾಗಿಯೂ ನನ್ನನ್ನು ಸೋಲಿಸುವ ಉದ್ದೇಶ ಅವರಿಗಿದ್ದಿದ್ದರೆ, ಡಾ. ಸಿ.ಎನ್. ಮಂಜುನಾಥ್ ಅವರ ಬದಲಿಗೆ ತಾವೇ ಸ್ಪರ್ಧಿಸುತ್ತಿದ್ದರು’ ಎಂದು ತಿರುಗೇಟು ನೀಡಿದರು.

‘ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅಥವಾ ಯೋಗೇಶ್ವರ್ ಸ್ಪರ್ಧಿಸಿ ನನಗೆ ಪ್ರಬಲ ಸ್ಪರ್ಧೆಯೊಡ್ಡುತ್ತಾರೆ ಎಂದುಕೊಂಡಿದ್ದೆ. ಆದರೆ, ಮಂಜುನಾಥ್ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ಯಾರೇ ನಿಂತರೂ ನನ್ನ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಧರ್ಮಯುದ್ಧದಲ್ಲಿ ಜಯಿಸೋಣ’ ಎಂಬ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಮೊದಲು ಅವರು ನಾಮಪತ್ರ ಸಲ್ಲಿಸಲಿ. ಆಮೇಲೆ ನೋಡೋಣ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT