ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಚಿತರಿಂದಲೇ ಯೋಗೇಶ್ವರ್ ಬಾವನ ಕೊಲೆ ಶಂಕೆ

Published 5 ಡಿಸೆಂಬರ್ 2023, 19:49 IST
Last Updated 5 ಡಿಸೆಂಬರ್ 2023, 19:49 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರ ಬಾವ ಮಹದೇವಯ್ಯ ಅವರನ್ನು ಪರಿಚಿತರೇ ಕೊಲೆಗೈದಿರುವ ಅನುಮಾನಗಳು ದಟ್ಟವಾಗುತ್ತಿವೆ.

ಮಹದೇವಯ್ಯ ಅವರ ಪರಿಚಿತರೇ ಸುಪಾರಿ ಪಡೆದು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಮಂಗಳವಾರ ಮಹದೇವಯ್ಯ ಅವರ ಕುಟುಂಬದ ಸದಸ್ಯರ ವಿಚಾರಣೆ ನಡೆಸಿದ್ದಾರೆ. ‘ಕೆಲವು ಮಹತ್ವದ ಸುಳಿವು ಲಭಿಸಿವೆ. ನಾಳೆ ಒಳಗಾಗಿ ಹಂತಕರ ಪತ್ತೆಯಾಗುವ ಸಾಧ್ಯತೆ ಇದೆ‘ ಎಂದು ಮೂಲಗಳು ತಿಳಿಸಿವೆ.

ಅಪಹರಣದ ವೇಳೆ ಮಹದೇವಯ್ಯ ಪ್ರತಿರೋಧ ವ್ಯಕ್ತಪಡಿಸಿಲ್ಲ ಎಂಬುದು ಅಪಹರಣ ಸ್ಥಳ ಗಮನಿಸಿದಾಗ ಗೊತ್ತಾಗಿದೆ. ಮೇಲಾಗಿ ಮನೆಯ ಕಪಾಟಿನಲ್ಲಿದ್ದ ಕೆಲವು ಮಹತ್ವದ ದಾಖಲೆ ಪತ್ರ ಮತ್ತು ನಗದು ಮಾತ್ರ ಕಾಣೆಯಾಗಿವೆ. ಪರಿಚಿತರ ಕೃತ್ಯ ಇರಬಹುದು ಎಂಬ ಗುಮಾನಿ ಪೊಲೀಸರಿಗೆ ಇದೆ. 

ಈ ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಯುತ್ತಿದೆ. ಹಂತಕರ ಪತ್ತೆಗಾಗಿ ಮತ್ತೆ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಲ್ಲೂಕಿನ ವಡ್ಡರದೊಡ್ಡಿಯಲ್ಲಿರುವ ತೋಟದ ಮನೆಯಿಂದ ಮಹದೇವಯ್ಯ ಅವರನ್ನು ಮೂವರು ಹಂತಕರು ಡಿ. 1ರಂದು ರಾತ್ರಿ ಅಪಹರಿಸಿ ಕಾರಿನಲ್ಲಿ ಅಪಹರಿಸಿದ್ದರು. ಹನೂರು ತಾಲ್ಲೂಕಿನ ರಾಮಾಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿತ್ತು. ಸಿಸಿಟಿವಿ ಕ್ಯಾಮೆರಾ ದೃಶ್ಯ ಆಧರಿಸಿ ತನಿಖೆ ನಡೆದಿದೆ.  

ತೋಟದಲ್ಲಿ ಅಂತ್ಯಕ್ರಿಯೆ: ಡಿ. 4ರಂದು ರಾತ್ರಿಯೇ ಮಹದೇವಯ್ಯ ಅವರ ಶವವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ತರಲಾಗಿತ್ತು. ಪೊಲೀಸರು ಮಂಗಳವಾರ ಕುಟುಂಬದವರಿಗೆ ಶವ ಹಸ್ತಾಂತರಿಸಿದ ಬಳಿಕ ವಡ್ಡರದೊಡ್ಡಿ ತೋಟದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಡಿ. 1ರಂದು ಬೆಂಗಳೂರಿನಿಂದ ಹೊರಟ್ಟಿದ್ದ ಮಹದೇವಯ್ಯ ಅವರು ರಾತ್ರಿ ಕಾರು ಸಮೇತ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬದವರು ಡಿ. 2ರಂದು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ಕೊಟ್ಟಿದ್ದರು. ನಂತರ, ಅಪಹರಣವಾಗಿರುವುದು ಖಚಿತವಾಗುತ್ತಿದ್ದಂತೆ 3ರಂದು ಅಪಹರಣ ಕುರಿತು ಎಫ್‌ಐಆರ್ ದಾಖಲಾಗಿತ್ತು. ಇದಾದ ಮಾರನೇಯ ದಿನವೇ ಮಹದೇವಯ್ಯ ಅವರ ಶವ ಹನೂರು ತಾಲ್ಲೂಕಿನಲ್ಲಿ ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT