ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಜಿ.ಪಂ: ಉಷಾ ರವಿ ನೂತನ ಉಪಾಧ್ಯಕ್ಷೆ

ತುಂಗಣಿ ಕ್ಷೇತ್ರದ ಸದಸ್ಯೆಯ ಅವಿರೋಧ ಆಯ್ಕೆ
Last Updated 17 ಡಿಸೆಂಬರ್ 2019, 13:47 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲಾ ಪಂಚಾಯಿತಿಯ ನೂತನ ಉಪಾಧ್ಯಕ್ಷೆಯಾಗಿ ತುಂಗಣಿ ಕ್ಷೇತ್ರದ ಸದಸ್ಯೆ ಸಿ.ವಿ. ಉಷಾ ರವಿ ಅವಿರೋಧವಾಗಿ ಆಯ್ಕೆಯಾದರು.

ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣಾಧಿಕಾರಿಯಾದ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಬೆಳಿಗ್ಗೆ 8.30ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಉಷಾ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅವರ ನಾಮಪತ್ರ ಕ್ರಮಬದ್ಧವಾದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು. ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್‌, ಜಿ.ಪಂ. ಸಿಇಒ ಇಕ್ರಂ ಪಾಲ್ಗೊಂಡರು.

ಹಲವರು ಗೈರು: ಒಟ್ಟು 22 ಸದಸ್ಯ ಬಲವುಳ್ಳ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಗೆ 15 ಸದಸ್ಯರು ಮಾತ್ರ ಹಾಜರಿದ್ದರು. ಅಗತ್ಯದಷ್ಟು ಕೋರಂ ಇದ್ದ ಕಾರಣ ಚುನಾವಣೆಗೆ ಅಡ್ಡಿ ಆಗಲಿಲ್ಲ. ಸದಸ್ಯರಾದ ಎಸ್.ಗಂಗಾಧರ್, ಸಿ.ಪಿ. ರಾಜೇಶ್, ಶಿವಕುಮಾರ್, ಎಚ್.ಕೆ. ನಾಗರಾಜು, ಶಂಕರ್, ಎಸ್.ನಾಗರತ್ನಾ, ನಾಜಿಯಾ ಖಾನಂ ಗೈರಾಗಿದ್ದರು.

ನೂತನ ಉಪಾಧ್ಯಕ್ಷರನ್ನು ಅಧ್ಯಕ್ಷ ಎಚ್.ಬಸಪ್ಪ, ಸದಸ್ಯರಾದ ಎಂ.ಎನ್. ನಾಗರಾಜು, ಎಂ.ಎನ್. ಮಂಜುನಾಥ್, ಎಚ್.ಎನ್. ಅಶೋಕ್, ನಾಗರತ್ನ, ದಿವ್ಯಾ ಗಂಗಾಧರ್, ವೀಣಾ ಕುಮಾರಿ, ಪ್ರಸನ್ನಕುಮಾರ್, ಎನ್.ಸುಗುಣ, ಡಿ.ಎಚ್.ಜಯರತ್ನಾ, ಭಾಗ್ಯ, ಚಂದ್ರಮ್ಮ, ಪ್ರಭಾವತಿ, ಬಿ.ಅಣ್ಣೇಗೌಡ ಅಭಿನಂದಿಸಿದರು.

ಈ ಸಂದರ್ಭ ಪತ್ರಕತ್ರರ ಜೊತೆ ಮಾತನಾಡಿದ ಉಪಾ ರವಿ ‘ಡಿ.ಕೆ. ಶಿವಕುಮಾರ್, ಸುರೇಶ್‌, ಹಾಗೂ ರವಿ ಅವರ ಸಹಕಾರದಿಂದ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಜಿಲ್ಲಾ ಪಂಚಾಯಿತಿಗೆ ಬರುವ ಸರ್ಕಾರದ ಅನುದಾನಗಳ ಸದ್ಬಳಕೆಗೆ ಆದ್ಯತೆ ನೀಡುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಲಹೆ ಪಡೆಯುತ್ತೇನೆ’ ಎಂದರು.

ಎರಡೂ ಹುದ್ದೆ ಕನಕಪುರದ ಪಾಲು

ಈ ಬಾರಿ ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳೆರಡೂ ಕನಕಪುರ ತಾಲ್ಲೂಕಿನ ಪಾಲಾಗಿದ್ದು, ಉಳಿದ ತಾಲ್ಲೂಕುಗಳ ಸದಸ್ಯರಲ್ಲಿ ಒಳಗೊಳಗೇ ಅಸಮಾಧಾನ ಮೂಡಿದೆ. ಈ ಕಾರಣಕ್ಕೆ ಚುನಾವಣೆ ಪ್ರಕ್ರಿಯೆಗೆ ಹಲವರು ಗೈರಾದರು ಎನ್ನಲಾಗಿದೆ.

ಕಳೆದ ಅವಧಿಯಲ್ಲಿ ಕನಕಪುರಕ್ಕೆ ಅಧ್ಯಕ್ಷ ಸ್ಥಾನ ಹಾಗೂ ಚನ್ನಪಟ್ಟಣಕ್ಕೆ ಉಪಾಧ್ಯಕ್ಷ ಸ್ಥಾನ ದೊರೆತಿತ್ತು. ಅದಕ್ಕೂ ಹಿಂದೆ ಚನ್ನಪಟ್ಟಣದಿಂದ ಅಧ್ಯಕ್ಷರು ಹಾಗೂ ಮಾಗಡಿಯಿಂದ ಉಪಾಧ್ಯಕ್ಷರು ಆಯ್ಕೆಯಾಗಿದ್ದರು. ಈ ಬಾರಿ ಕನಿಷ್ಠ ಉಪಾಧ್ಯಕ್ಷ ಸ್ಥಾನವನ್ನಾದರೂ ರಾಮನಗರ ತಾಲ್ಲೂಕಿಗೆ ಬಿಟ್ಟುಕೊಡಬೇಕು ಎಂಬ ಆಗ್ರಹವಿತ್ತು. ಆದರೆ ಈಗ ಸಂಸತ್‌ ಸದಸ್ಯರು, ಪರಿಷತ್‌ ಸ್ಥಾನದ ಜೊತೆಗೆ ಜಿ.ಪಂ. ಹುದ್ದೆಗಳೂ ಕನಕಪುರ ಪಾಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT