ರಾಮನಗರ: ರಾಜ್ಯದಾದ್ಯಂತ 4,900 ಕಿ.ಮೀ. ವ್ಯಾಪಕ ಸಂಚಾರದ ನಂತರ ಕೊನೆಯಲ್ಲಿ ರಾಮನಗರಕ್ಕೆ ಬಂದ ವಂದೇ ಮಾತರಂ ಭಾ-ರಥ ಯಾತ್ರೆ ಭಾನುವಾರ ಬರ ಮಾಡಿಕೊಳ್ಳಲಾಯಿತು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಿಬಂದ ಭಾ-ರಥ ಯಾತ್ರೆಯು ಜಿಲ್ಲೆಯ ಗಡಿ ಮುಟ್ಟಿದಾಗ ನೂರಾರು ಯುವಕರು ಬೈಕ್ ಮೂಲಕ ಮೊದಲು ಐಜೂರು ವೃತ್ತಕ್ಕೆ ಕರೆತಂದರು.

ನಂತರ ಹಳೇ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡಿತು. ಗಾಯಕ ರಮೇಶ್ಚಂದ್ರ ಮತ್ತು ತಂಡದವರಿಂದ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು.
ಈಸಂದರ್ಭದಲ್ಲಿ ಭಾ-ರಥ ಯಾತ್ರೆಯ ಪದಾಧಿಕಾರಿ ಎಸ್.ಎಲ್.ಎನ್.ಸ್ವಾಮಿ ಮಾತನಾಡಿ, ದೇಶವು 70ನೇ ಸ್ವಾತಂತ್ರ್ಯ ದಿನಾಚರ
ಣೆಯನ್ನು ಆಚರಿಸುತ್ತಿದೆ. ಆ ದಿನಗಳಲ್ಲಿ ಸ್ವಾತಂತ್ರ್ಯವನ್ನು ಕಂಡವರು ಇಂದು ಶೇ 5ರಷ್ಟು ಮಾತ್ರ ಇದ್ದಾರೆ.

ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆಯು ಒಂದು ದಿನದ ರಜೆಯ ಮಜಾದ ಪ್ರತೀಕವಾಗಿದೆ.

ಇದನ್ನು ಹೋಗಲಾಡಿಸಿ ಎಲ್ಲರಲ್ಲಿಯೂ ದೇಶಭಕ್ತಿಯನ್ನು ಮೈಗೂಡಿ
ಸುವ ನಿಟ್ಟಿನಲ್ಲಿ ಭಾ-ರಥ ಯಾತ್ರೆಯು ಯುವ ಸಮೂಹ ಎಚ್ಚರಿಸುವ ದಿಕ್ಕಿನಲ್ಲಿ ಒಂದು ತಿಂಗಳ ಕಾಲ ರಾಜ್ಯದಾದ್ಯಂತ ರಥಯಾತ್ರೆ ಕೈಗೊಂಡಿದೆ ಎಂದು ಅವರು ಹೇಳಿದರು.

ಪದಾಧಿಕಾರಿಗಳಾದ ಬಿ.ಟಿ. ಅನಿಲ್ ಬಾಬು, ಪ್ರವೀಣ್ ಗೌಡ, ರಾಜೇಶ್, ಶಂಕರ್, ರಾಮಾಂಜನೇಯ, ಚಂದ್ರಶೇಖರ್ ರೆಡ್ಡಿ, ರಮೇಶ್, ಚಂದನ್, ಆನಂದ ಸ್ವಾಮಿ, ಗುಂಗರಹಳ್ಳಿ ಚನ್ನಪ್ಪ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.